ಹಿನ್ನೋಟ 2019: ಗಂಭೀರವಾಗಿ ಗಾಯಗೊಂಡ ಕ್ರಿಕೆಟಿಗರು, ಭಯಾನಕ ವಿಡಿಯೋಗಳು!

ಕ್ರಿಕೆಟ್ ನಲ್ಲಿ ಎಷ್ಟೇ ಸುರಕ್ಷತೆ ಇದ್ದರೂ ಬ್ಯಾಟ್ಸ್ ಮನ್, ಬೌಲರ್ ಮತ್ತು ಫೀಲ್ಡರ್ಸ್ ಗಂಭೀರವಾಗಿ ಗಾಯಗೊಂಡಿರುವ ಸಾಕಷ್ಟು ಘಟನೆಗಳು ವರದಿಯಾಗಿದೆ. ಅಂತೆ 2019ರಲ್ಲಿ ಮೈದಾನದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆಟಗಾರರ ವಿಡಿಯೋಗಳು ಇಲ್ಲಿವೆ.
ಗಾಯಗೊಂಡಿದ್ದ ಆಟಗಾರರು
ಗಾಯಗೊಂಡಿದ್ದ ಆಟಗಾರರು

ಕ್ರಿಕೆಟ್ ನಲ್ಲಿ ಎಷ್ಟೇ ಸುರಕ್ಷತೆ ಇದ್ದರೂ ಬ್ಯಾಟ್ಸ್ ಮನ್, ಬೌಲರ್ ಮತ್ತು ಫೀಲ್ಡರ್ಸ್ ಗಂಭೀರವಾಗಿ ಗಾಯಗೊಂಡಿರುವ ಸಾಕಷ್ಟು ಘಟನೆಗಳು ವರದಿಯಾಗಿದೆ. ಅಂತೆ 2019ರಲ್ಲಿ ಮೈದಾನದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆಟಗಾರರ ವಿಡಿಯೋಗಳು ಇಲ್ಲಿವೆ.

ಉಮೇಶ್ ಬೌನ್ಸರ್‌ಗೆ ಕುಸಿದು ಬಿದ್ದ ಎಲ್ಗರ್, ಪಂದ್ಯದಿಂದಲೇ ಔಟ್!
ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಲ್ಗರ್ ಟೀಂ ಇಂಡಿಯಾದ ವೇಗಿ ಉಮೇಶ್ ಯಾದವ್ ಬೌನ್ಸರ್ ಗೆ ಕುಸಿದು ಬಿದ್ದಿದ್ದು ಗಾಯಗೊಂಡಿರುವ ಅವರು ಪಂದ್ಯದಿಂದಲೆ ಔಟ್ ಆಗಿದ್ದರು. ರಾಂಚಿಯಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಉಮೇಶ್ ಯಾದವ್ ಅವರ ಬೌನ್ಸರ್ ಎಲ್ಗರ್ ಅವರ ಹೆಲ್ಮೆಟ್ ಗೆ ತಗುಲಿತ್ತು. ಈ ವೇಳೆ ಕುಸಿದು ಬಿದ್ದ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. ಎಲ್ಗರ್ 29 ಎಸೆತಗಳಲ್ಲಿ 16 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದರು ಆದರೆ ಉಮೇಶ್ ಬೌನ್ಸರ್ ಗೆ ಗಾಯಗೊಂಡು ಅವರು ಪಂದ್ಯದಿಂದ ಹೊರಗುಳಿದರು.

ಮಾರಣಾಂತಿಕ ಬೌಲಿಂಗ್‌ಗೆ ಬ್ಯಾಟ್ಸ್‌ಮನ್ ದವಡೆಯಿಂದ ಚಿಮ್ಮಿದ ರಕ್ತ, ಭಯಾನಕ ವಿಡಿಯೋ!

ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಅವರು ಮಾರಣಾಂತಿಕ ಬೌಲಿಂಗ್ ದಾಳಿಗೆ ಗಾಯಗೊಂಡಿರುವ ವಿಡಿಯೋ ಭಯಾನಕವಾಗಿದೆ. ಬರ್ಮಿಂಗ್ ಹ್ಯಾಮ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಎಸೆದ ಮಾರಕ ಚೆಂಡು ಕ್ಯಾರಿ ಮುಖಕ್ಕೆ ಬಡಿದ ಘಟನೆ ನಡೆಯಿತು. ಈ ವೇಳೆ ಕ್ಯಾರಿ ತಲೆಗೆ ಹಾಕಿದ್ದ ಹೆಲ್ಮೆಟ್ ಕಿತ್ತು ಬಂದಿತ್ತು. ಆರ್ಚರ್ 139 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಚೆಂಡನ್ನು ಬಾರಿಸಲು ಹೋಗಿದ್ದು ಕ್ಯಾರಿ ಗಲ್ಲಕ್ಕೆ ಗಾಯವಾಗಿ ರಕ್ತ ಬಂದಿತ್ತು. ಕೂಡಲೇ ಅವರ ಮುಖಕ್ಕೆ ಬ್ಯಾಂಡೇಜ್ ಸುತ್ತಿದ್ದರು. ನಂತರ ಬ್ಯಾಟಿಂಗ್ ಮಾಡಿದ ಕ್ಯಾರಿ 47 ರನ್ ಗಳಿಸಿದ್ದಾಗ ಔಟಾದರು.

ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಒಡೆದ ರೂಟ್ 'ಅಬ್ಡೊಮಿನಲ್ ಗಾರ್ಡ್', ಕುಸಿದು ಬಿದ್ದ ಜೋ, ವಿಡಿಯೋ!

ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ಅಬ್ಡೊಮಿನಲ್ ಗಾರ್ಡ್ ಒಡೆದು ಹೋಗಿದೆ. ಮಿಚೆಲ್ ಸ್ಟಾರ್ಕ್ ಗಂಟೆಗೆ 140 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದರು. ಈ ವೇಳೆ ರಕ್ಷಣಾತ್ಮಕ ಬ್ಯಾಟಿಂಗ್ ಮುಂದಾದಾಗ ಚೆಂಡು ನೇರವಾಗಿ ಅಬ್ಡೊಮಿನಲ್ ಗಾರ್ಡ್ ಗೆ ಬಿದ್ದಿದೆ. ಕೂಡಲೇ ನೋವಿನಿಂದ ರೂಟ್ ಕುಸಿದು ಬಿದ್ದರು. ನಂತರ ಅಬ್ಡೊಮಿನಲ್ ಗಾರ್ಡ್ ತೆಗೆದು ನೋಡಿದಾಗ ಎರಡು ಚೂರಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ಯಾಚ್ ಹಿಡಿಯಲು ಹೋಗಿ ಮುಖಾಮುಖಿ ಡಿಕ್ಕಿ, ಜೀವಕ್ಕೆ ಕುತ್ತು ತಂದುಕೊಂಡ್ರಾ!

ತಂಡವನ್ನು ಗೆಲ್ಲಿಸಬೇಕು ಎಂಬ ಉತ್ಸಾಹದಲ್ಲಿದ್ದ ಇಬ್ಬರು ಆಟಗಾರರು ಬೌಂಡರಿಯಲ್ಲಿ ಕ್ಯಾಚ್ ಹಿಡಿಯುವ ವೇಳೆ ಮುಖಾಮುಖಿ ಡಿಕ್ಕಿಯಾಗಿದ್ದಾರೆ. ಅದ್ಭುತ ಕ್ಯಾಚ್ ಹಿಡಿದರು ಡಿಕ್ಕಿಯಿಂದಾಗಿ ಫೀಲ್ಡರ್ ಪ್ರಜ್ಞೆ ತಪ್ಪಿ ಬೌಂಡರಿ ಗೆರೆಯನ್ನು ಮುಟ್ಟಿದ್ದಾನೆ. ಇಬ್ಬರು ಆಟಗಾರರು ಗಂಭೀರವಾಗಿ ಗಾಯಗೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ನ್ಯೂಜಿಲ್ಯಾಂಡ್ ಕೊನೆಯ ಓವರ್ ನಲ್ಲಿ 7 ರನ್ ಬೇಕಿತ್ತು. ಈ ವೇಳೆ ಮಾರಕ ಬೌಲಿಂಗ್ ದಾಳಿ ಮಾಡಿದ್ದ ಡಿ ಸಿಲ್ವಾ ಮೊದಲ ಎರಡು ಎಸೆತಗಳಲ್ಲಿ ವಿಕೆಟ್ ಪಡೆದಿದ್ದರು. ಇನ್ನು ಮೂರನೇ ಎಸೆತದಲ್ಲಿ ಸ್ಯಾಂಟ್ನರ್ ಬಿರುಸಿನಿಂದ ಹೊಡೆದರು ಚೆಂಡು ಸಿಕ್ಸರ್ ಬೌಂಡರಿಯತ್ತ ಹೋಗುತ್ತಿದ್ದಾಗ ಜಯಸೂರಿಯಾ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರು. ಆದರೆ ಮೆಂಡಿಸ್ ಡಿಕ್ಕಿಯಾಗಿದ್ದರಿಂದ ಅವರು ಬೌಂಡರಿ ಗೆರೆ ಮುಟ್ಟಿದ್ದರಿಂದ ಅಂಪೈರ್ ಸಿಕ್ಸರ್ ಎಂದು ಘೋಷಿಸಿದರು. ಇನ್ನು ನಾಲ್ಕನೇ ಎಸೆತದಲ್ಲಿ ಸ್ಯಾಂಟ್ನರ್ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಆದರೆ ಈ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಆಟಗಾರರು ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ತಂಡದ ವೈದ್ಯರು ಪರೀಕ್ಷಿಸಿದರು. ಚಿಕಿತ್ಸೆ ನಂತರ ಇಬ್ಬರು ಆಟಗಾರರು ಚೇತರಿಸಿಕೊಂಡರು.

ಎಂಎಸ್ ಧೋನಿಗೆ ಏನಾಯ್ತು? ಆಟದ ಮಧ್ಯೆ ಮೈದಾನದಲ್ಲಿ ರಕ್ತ ಉಗುಳಿದ ಧೋನಿ!


ವಿಶ್ವಕಪ್ ಟೂರ್ನಿ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ರಕ್ತ ಉಗುಳಿದ ಫೋಟೋ ವೈರಲ್ ಆಗಿತ್ತು. ಕೈ ಬೆರಳಿನಿಂದ ಜಿನುಗುತ್ತಿದ್ದ ರಕ್ತವನ್ನು ಚೀಪಿ ಧೋನಿ ಅದನ್ನು ಮೈದಾನದಲ್ಲಿ ಉಗುಳಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಧೋನಿ ವೃತ್ತಿಪರತೆ ಹಾಗೂ ದೇಶಕ್ಕಾಗಿ ತಮ್ಮ ನೋವನ್ನೇ ಮರೆತು ಆಡುತ್ತಿದ್ದಾರೆ ಎಂದು ಕೊಂಡಾಡಿದ್ದರು.

ವಿಶ್ವಕಪ್ ಗೂ ಮುನ್ನು ಗಾಯಗೊಂಡಿದ್ದ ಜಸ್ ಪ್ರೀತ್ ಬುಮ್ರಾ!

ಐಪಿಎಲ್ ಪಂದ್ಯದ ವೇಳೆ ಗಾಯಗೊಂಡ ಬುಮ್ರಾ ಐಸಿಸಿ ವಿಶ್ವಕಪ್ ಮಹಾ ಸಮರಕ್ಕೆ ಇನ್ನು ಕೆಲ ತಿಂಗಳು ಬಾಕಿಯಿದ್ದು ಈ ಮಧ್ಯೆ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿರುವುದು ಆಯ್ಕೆಗಾರರ ನಿದ್ದೆಗೆಡಿಸಿದೆ.

ಅಂಪೈರ್‌ಗೂ ಹೆಲ್ಮೆಟ್ ಬೇಕೆ ಬೇಕು, ಇಲ್ಲದ್ದಿದ್ದರೆ ಹೀಗೆ ಆಗೋದು; ವಿಡಿಯೋ ವೈರಲ್!
ಕ್ರಿಕೆಟ್ ನಲ್ಲಿ ಕೇವಲ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಮಾತ್ರ ಹೆಲ್ಮೆಟ್ ಹಾಕಿಕೊಂಡರೆ ಸಾಲದು. ಅಂಪೈರ್‌ಗಳು ಸಹ ಹೆಲ್ಮೆಟ್ ಬಳಸುವುದು ಸೂಕ್ತ ಇಲ್ಲದಿದ್ದರೆ ಹೀಗೆ ಆಗೋದು. ಹೌದು. ಇರಾನಿ ಕಪ್ ಟೂರ್ನಿಯ ವೇಳೆ ಅಂಪೈರಿಂಗ್ ಮಾಡುತ್ತಿದ್ದ ನಂದನ್ ಎಂಬುವರಿಗೆ ಫೀಲ್ಡರ್ ಎಸೆತ ಚೆಂಡು ತಲೆಗೆ ಬಿದ್ದಿದ್ದು ಪರಿಣಾಮ ಅಂಪೈರ್ ಮೈದಾನದಲ್ಲೇ ಕುಸಿದು ಬಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com