ಕ್ರಿಕೆಟ್
ಅಮಿತ್ ಭಂಡಾರಿ ಹಲ್ಲೆ ಪ್ರಕರಣ: ಕ್ರಿಕೆಟಿಗ ಅನುಜ್‌ಗೆ ಅಜೀವ ನಿಷೇಧ
ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಟೀಂ ಇಂಡಿಯಾ ಮಾಜಿ ವೇಗಿ ಅಮಿತ್ ಭಂಡಾರಿ ಮೇಲೆ ಗುಂಪೊಂದು ನಡೆಸಿದ್ದ ಹಲ್ಲೆ ಪ್ರಕರಣ ಸಂಬಂಧ 23 ವರ್ಷದ ಕ್ರಿಕೆಟಿಗ ಅನುಜ್ ದೇಢಾ...
ನವದೆಹಲಿ: ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಟೀಂ ಇಂಡಿಯಾ ಮಾಜಿ ವೇಗಿ ಅಮಿತ್ ಭಂಡಾರಿ ಮೇಲೆ ಗುಂಪೊಂದು ನಡೆಸಿದ್ದ ಹಲ್ಲೆ ಪ್ರಕರಣ ಸಂಬಂಧ 23 ವರ್ಷದ ಕ್ರಿಕೆಟಿಗ ಅನುಜ್ ದೇಢಾಗೆ ಅಜೀವ ನಿಷೇಧ ಹೇರಲಾಗಿದೆ.
ಈ ಕುರಿತು ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಜತ್ ಶರ್ಮಾ ತಿಳಿಸಿದ್ದು, ಭಾರತ ತಂಡದ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರ ಸಲಹೆಯ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಅನುಜ್ ದೇಧಾ ಎಂಬುವವರನ್ನು 23 ವಯೋಮಿತಿ ತಂಡಕ್ಕೆ ಆಯ್ಕೆಗೆ ಪರಿಗಣಿಸಿರಲಿಲ್ಲ. ಈ ಕಾರಣದಿಂದಾಗಿ ಸೋಮವಾರ ಮಧ್ಯಾಹ್ನ ದೆಹಲಿ ಹಿರಿಯರ ತಂಡದ ಅಭ್ಯಾಸ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಏಕಾಏಕಿ ಅಂಗಳಕ್ಕೆ ನುಗ್ಗಿದ ಗುಂಪೊಂದು ಹಾಕಿ ಬ್ಯಾಟ್, ರಿವಾಲ್ವರ್ ಹಾಗೂ ರಾಡ್‌ಗಳ ಮೂಲಕ ಅಮಿತ್ ಭಂಡಾರಿ ಅವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿತ್ತು. ಭಂಡಾರಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಟಗಾರ ಅನೂಜ್ ಹಾಗೂ ಆತನ ಸಹೋದರ ನರೇಶ್ ಬಂಧಿಸಲಾಗಿತ್ತು.
ಭಾರತ ತಂಡದ ಮಾಜಿ ಆಟಗಾರರರಾದ ವಿರೇಂದ್ರ ಸೆಹ್ವಾಗ್, ಮದನ್ ಲಾಲ್, ಬಿಷನ್ ಸಿಂಗ್ ಬೇಡಿ ಹಗೂ ಭಾರತ ತಂಡದ ಶಿಖರ್ ಧವನ್ ವಿರೋಧ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ.