ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ: ಖಲೀಲ್, ಜಯದೇವ್ ನಡುವೆ ಯಾರಿಗೆ ಸ್ಥಾನ?

ಮುಂದಿನ ವಿಶ್ವಕಪ್ ಗೆ ತಾಲೀಮು ಎಂದೇ ಬಿಬಿತವಾಗಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಫೆಬ್ರವರಿ 24ರಿಂದ ಪ್ರಾರಂಬವಾಗಲಿದೆ. ಇದೇ ವೇಳೆ ಏಕದಿನ ಸರಣಿಗೆ ಆಟಗಾರರ ಆಯ್ಕೆ ನಡೆಯುತ್ತಿದ್ದು....
ಖಲೀಲ್ ಅಹ್ಮದ್
ಖಲೀಲ್ ಅಹ್ಮದ್
Updated on
ಮುಂಬೈ: ಮುಂದಿನ ವಿಶ್ವಕಪ್ ಗೆ ತಾಲೀಮು ಎಂದೇ ಬಿಬಿತವಾಗಿರುವ ಭಾರತ-ಆಸ್ಟ್ರೇಲಿಯಾ ನ0ಡುವಿನ ಏಕದಿನ ಸರಣಿ ಫೆಬ್ರವರಿ 24ರಿಂದ ಪ್ರಾರಂಬವಾಗಲಿದೆ. ಇದೇ ವೇಳೆ ಏಕದಿನ ಸರಣಿಗೆ ಆಟಗಾರರ ಆಯ್ಕೆ ನಡೆಯುತ್ತಿದ್ದು ಎಡಗೈ ಬೌಲರ್ ಜಯದೇವ್ ಉನಾದ್ ಕಟ್ ಹಾಗೂ ಖಲೀಲ್ ಅಹ್ಮದ್ ನಡುವೆ ಯಾರನ್ನು ಆಯ್ಕೆ ಮಾಡಬೇಕೆನ್ನುವುದು ಇನ್ನೂ ನಿರ್ಧಾರವಾಗಿಲ್ಲ.
ಮೇ 30ರಿಂದ ಇಂಗ್ಲೆಂಡ್ ನಲ್ಲಿ ಪ್ರಾರಂಭಗೊಳ್ಲಲಿರುವ ವಿಶ್ವಕಪ್ ಪಂದ್ಯಕ್ಕೆ ಮುನ್ನ ನಡೆಯುವ ಕಡೆಯ ಅಂತರಾಷ್ಟ್ರೀಯ ಸರಣಿ ಇದಾಗಿದ್ದು ಇದರಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಎರಡು ಟ್ವೆಂಟಿ -20 ಪಂದ್ಯಗಳು ಮತ್ತು ಐದು ಏಕದಿನ ಪಂದ್ಯಗಳು ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯು ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಅವರಲ್ಲಿಯಾರಿಗೆ ವಿಶ್ವಕಪ್ ನ ಲ್ಲಿ ಆಡಲು ಅವಕಾಶ ಕಲ್ಪಿಸಲಿದೆ ಎನ್ನುವ ಕುತೂಹಲವನ್ನುಂಟುಮಾಡಿದೆ. ಇದೇ ವೇಳೆ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ  ಕೆ.ಎಲ್ ರಾಹುಲ್ ಗೆ ಸಹ ಈ ಸರಣಿ ಮಹತ್ವದ್ದಾಗಿದೆ.
ಏಕದಿನ ಸರಣಿಗೆ ಮುನ್ನ ನಡೆಯುವ ಎರಡು ಟಿ 20 ಪಂದ್ಯಗಳಲ್ಲಿ ಭಾಗವಹಿಸದ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯಲಿದ್ದಾರೆ. 
ಆಯ್ಕೆದಾರರು ಈಗಾಗಲೇ ವಿಶ್ವಕಪ್ ಗಾಗಿ 13 ಆಟಗಾರರ ಹೆಸರನ್ನು ಮುಂದೆ ಬಿಟ್ಟಿದ್ದಾರೆ. ಅವರೆಂದರೆ ವಿರಾಟ್ ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮಾ, ಅಂಬಟಿ ರಾಯುಡು, ಮಹೇಂದ್ರ ಸಿಂಗ್ ಧೋನಿ, ಕೇದಾರ ಜಾಧವ್, ಹಾರ್ದಿಕ್  ಪಾಂಡ್ಯ, ವಿಜಯ್ ಶಂಕರ್, ಯುಜ್ವೆಂದ್ರ ಚಾಹಲ್, ಕುಲದೀಪ್ಯಾದವ್, ಭುವನೇಶ್ವರ ಕುಮಾರ್, ಜಸ್ಮಿತ್ ಬುಮ್ರಾಮತ್ತು ಮೊಹಮ್ಮದ್ ಶಮಿ. ಸ್ಪಿಪ್ಪರ್ ಕೊಹ್ಲಿ ಮತ್ತು ವೇಗದ ಬೌಲರ್ ಬಮ್ರಾ ಅವರು ಅಂತಿಮ ಹಂತದ ಪೂರ್ವಾಭ್ಯಾಸದಲ್ಲಿ ತೊಡಗಲಿದ್ದಾರೆ.ಇನ್ನೂ ಆಯ್ಕೆದಾರರು ತಂಡಕ್ಕೆ ಹೆಚ್ಚುವರಿಯಾಗಿ ಮೂರು ಇಲ್ಲವೆ ನಾಲ್ಕು ಜನರನ್ನು ಆಯ್ಕೆ ಮಾಡಲು ಉದ್ದೇಶಿಸಿದ್ದು ಇದಕ್ಕೆ ಕನಿಷ್ಟ ನಾಲ್ವರ ನಡುವೆ ಸ್ಪರ್ಧೆ ಇರಲಿದೆ.
ಬಮ್ರಾ, ಶಮಿ ಮತ್ತು ಭುವನೇಶ್ವರ್ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಗಿಟ್ಟಿಸಬಹುದಾದರೂ ಮೂಳೆ ಸಮಸ್ಯೆ, ಎಡಗಿಅನ ಗಾಯದ ಸಮಸ್ಯೆಗಳು ಇವರನ್ನು ಕಾಡುವ ಸಾಧ್ಯತೆ ಇದೆ.
ಇದೇ ವೇಳೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡಿನಲ್ಲಿ ರಾಜಸ್ಥಾನ್  ಮೂಲದ ಯುವ ವೇಗಿ ಖಲೀಲ್  ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸುವ ಕನಸು ಕಾಣುತ್ತಿದ್ದಾರೆ. ರಣಜಿ ಟ್ರೋಫಿ ಋತುವಿನಲ್ಲಿ ಸೌರಾಷ್ಟ್ರವನ್ನು ಫೈನಲ್ ಗೆ ಮುನ್ನಡೆಸಿದ್ದ ಉನಾದ್ ಕಟ್ ಸಹ ಪ್ರಬುದ್ಧ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇವರು ಐಪಿಎಲ್ ನಲ್ಲಿ ಉತ್ತಮ ಅನುಭವ ಗಳಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com