ಸನತ್ ಜಯಸೂರ್ಯಗೆ 2 ವರ್ಷ ನಿಷೇಧ ಹೇರಿದ ಐಸಿಸಿ

ಭ್ರಷ್ಟಾಚಾರ ನಿಗ್ರಹ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ತಂಡದ ಮಾಜಿ ನಾಯಕ, ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸನತ್​ ಜಯಸೂರ್ಯ...
ಸನತ್ ಜಯಸೂರ್ಯ
ಸನತ್ ಜಯಸೂರ್ಯ
ಕೊಲಂಬೊ: ಭ್ರಷ್ಟಾಚಾರ ನಿಗ್ರಹ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ತಂಡದ ಮಾಜಿ ನಾಯಕ, ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸನತ್​ ಜಯಸೂರ್ಯ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಎರಡು ವರ್ಷ ನಿಷೇಧ ಹೇರಿದೆ.
ಜಯಸೂರ್ಯ ಅವರು ಭ್ರಷ್ಟಾಚಾರ ತನಿಖೆಗೆ ಸಹಕರಿಸಿಲ್ಲ ಎಂದು ಅವರನ್ನು ಕ್ರಿಕೆಟ್ ನ ಎಲ್ಲ ಪ್ರಕಾರಗಳಿಂದಲೂ ಎರಡು ವರ್ಷ ನಿಷೇಧ ವಿಧಿಸಲಾಗಿದೆ.
ಸನತ್​ ಜಯಸೂರ್ಯ ಅವರು ಎರಡು ಪ್ರಕಾರದ ಭ್ರಷ್ಟಾಚಾರ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಮೇಲೆ ನಿಷೇಧ ವಿಧಿಸಲಾಗುತ್ತಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಲಂಕಾ ಕ್ರಿಕೆಟ್​ನಲ್ಲಿನ ಭ್ರಷ್ಟಾಚಾರ ಪ್ರಕರಣದ ತನಿಖೆಯಲ್ಲಿ ಜಯಸೂರ್ಯ ಸಹಕಾರ ನೀಡದೇ ಐಸಿಸಿ ಕಾನೂನಿನ ವಿಧಿ 2. 4. 6 ಅನ್ನು ಉಲ್ಲಂಘಿಸಿದ್ದಾರೆ. ಜಯಸೂರ್ಯ ಅವರು ದಾಖಲೆಗಳನ್ನು ನಾಶಪಡಿಸುವ ಮೂಲಕ ತನಿಖೆಗೆ ಅಡೆತಡೆ ಉಂಟು ಮಾಡಿದ್ದಾರೆ. ಇದರಿಂದಾಗಿ ತನಿಖೆಯಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದು ಐಸಿಸಿ ಕಾನೂನಿನ ವಿಧಿ 2.4.7ರ ಉಲ್ಲಂಘನೆ ಎಂದು ಐಸಿಸಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com