ಸಂಗ್ರಹ ಚಿತ್ರ
ಕ್ರಿಕೆಟ್
ಚಾಹಲ್ ಸರಿಯಾಗಿ ಕೆಲಸ ಮಾಡ್ತಿಲ್ವ? ರೋಹಿತ್ ಶರ್ಮಾ ಮಗಳಿಗೆ ಬೇಬಿ ಸಿಟ್ಟರ್ ಆಗಲು ರೆಡಿ: ರಿಷಭ್ ಪಂತ್
ಆಸೀಸ್ ನಾಯಕ ಟಿಮ್ ಪೈನ್ ಬಳಿಕ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಮಗಳಿಗೆ ಬೇಬಿ ಸಿಟ್ಟರ್ ಆಗುವುದಾಗಿ ರಿಷಭ್ ಪಂತ್ ಹೇಳಿದ್ದಾರೆ.
ಆಸೀಸ್ ನಾಯಕ ಟಿಮ್ ಪೈನ್ ಬಳಿಕ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಮಗಳಿಗೆ ಬೇಬಿ ಸಿಟ್ಟರ್ ಆಗುವುದಾಗಿ ಟೀಂ ಇಂಡಿಯಾ ಭರವಸೆಯ ಆಟಗಾರ ರಿಷಭ್ ಪಂತ್ ಹೇಳಿದ್ದಾರೆ.
ರೋಹಿತ್ ಶರ್ಮಾ ಇತ್ತೀಚಿಗೆ ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಆಗುತ್ತೇಯಾ? ಎಂದು ರಿಷಭ್ ಪಂತ್ ಅವರನ್ನು ಕೇಳಿದ್ದಾರೆ. ಇದನ್ನು ಸಂತೋಷದಿಂದಲೇ ಸ್ವೀಕರಿಸುವುದಾಗಿ ಪ್ರತಿಕ್ರಿಯಿಸಿರುವ ರಿಷಭ್ ಪಂತ್ ಸಮೈರಾಗೆ ಬೇಬಿ ಸಿಟ್ಟರ್ ಆಗುವುದಾಗಿ ಹೇಳಿದ್ದಾರೆ.
ಆಸ್ಟ್ರೇಲಿಯಾದ ಆಟಗಾರ ನಂತರ ರೋಹಿತ್ ಶರ್ಮಾ, ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಆಗುತ್ತೀಯಾ? ಎಂದು ದೆಹಲಿಯ ಯುವ ಆಟಗಾರ ರಿಷಭ್ ಪಂತ್ ಅವರನ್ನು ಕೇಳಿದ್ದಾರೆ. ಇದಕ್ಕೆ ಕೂಡಲೇ ಸ್ಪಂದಿಸಿರುವ ರಿಷಭ್ ಪಂತ್ , ಚಾಹಲ್ ಸರಿಯಾಗಿ ಕೆಲಸ ಮಾಡ್ತಿಲ್ವ? ಎಂದು ಪ್ರಶ್ನಿಸಿದ್ದು, ಸಮೈರಾಗೆ ಸಂತೋಷದಿಂದ ಬೇಬಿ ಸಿಟ್ಟರ್ ಆಗುವುದಾಗಿ ಹೇಳಿದ್ದಾರೆ. ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ನಡುವಿನ ಹಾಸ್ಯದ ಟ್ವೀಟ್ ಗಳು ವೈರಲ್ ಆಗಿವೆ.
Morning buddy. Heard your a good baby sitter, need one right now. Ritika will be quite happy
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ