ಜನಾಂಗೀಯ ನಿಂದನೆ: ಐಸಿಸಿಯಿಂದ ಸರ್ಫರಾಜ್ ಗೆ ನಾಲ್ಕು ಪಂದ್ಯ ನಿಷೇಧ ಶಿಕ್ಷೆ
ದುಬೈ: ದಕ್ಷಿಣ ಆಫ್ರಿಕಾ ಆಟಗಾರ ಆಂಡಿಲೆ ವಿರುದ್ಧ ಜನಾಂಗೀಯ ನಿಂದನೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಅವರನ್ನು ಮುಂದಿನ ನಾಲ್ಕು ಪಂದ್ಯಗಳಿಂದ ನಿಷೇಧ ವಿಧಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ ) ಆದೇಶ ಹೊರಡಿಸಿದೆ.
ಜನವರಿ 22 ರಂದು ಡರ್ಬನ್ ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಎದುರಾಳಿ ತಂಡದ ಆಟಗಾರ ಆಂಡಿಲೆಯನ್ನು ಕರಿಯ ಎಂದು ಸರ್ಫರಾಜ್ ನಿಂಧಿಸಿದ್ದರು.
ಸ್ಟಂಪ್ ಗೆ ಅಳವಡಿಸಿದ್ದ ಮೈಕ್ ನಲ್ಲಿ ಅವರ ಅವಹೇಳನಕಾರಿ ಮಾತುಗಳು ದಾಖಲಾಗಿದ್ದವು.
ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಸರ್ಫರಾಜ್ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೇರಿದಂತೆ ಮಾಜಿ ವೇಗಿ ಶೋಯೆಬ್ಅಖ್ತರ್ ಮತ್ತಿತರ ಪಾಕಿಸ್ತಾನದ ಹಲವು ಕ್ರಿಕೆಟ್ ಆಟಗಾರರು ವಿಷಾದ ವ್ಯಕ್ತಪಡಿಸಿದ್ದರು.
ಐಸಿಸಿ ನಿಯಮಗಳನ್ನ ಉಲ್ಲಂಘಿಸಿರುವುದಾಗಿ ಸರ್ಫರಾಜ್ ಕೂಡಾ ಒಪ್ಪಿಕೊಂಡಿರುವುದಾಗಿ ಅವರನ್ನು ಉಳಿದಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಏಕದಿನ ಪಂದ್ಯಗಳು ಹಾಗೂ ಫೆಬ್ರವರಿ 1ರಿಂದ ಆರಂಭವಾಗಲಿರುವ ಟಿ-20 ಸರಣಿಯಿಂದ ಅವರನ್ನು ನಿಷೇಧಿಸಲಾಗಿದೆ.
ಸರ್ಫರಾಜ್ ತಪ್ಪು ಮಾಡಿರುವುದನ್ನು ಹೇಳಿಕೊಂಡಿದ್ದು ಕ್ಷಮೆಯಾಚಿಸಿದ್ದಾರೆ. ಆದ್ದರಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್
ರಿಚರ್ಡಸನ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ