ಯುವರಾಜ್
ಕ್ರಿಕೆಟ್
ಗ್ಲೋಬಲ್ ಟಿ-20 ಕೆನಡಾ ಟೂರ್ನಮೆಂಟ್: ಯುವಿ, ಗೇಲ್ ಮಸ್ ಡ್ಯಾನ್ಸ್!
ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಯುವರಾಜ್ ಸಿಂಗ್ ಗ್ಲೋಬಲ್ ಟಿ-20 ಕೆನಡಾ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ಟೊರಂಟೊ: ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಯುವರಾಜ್ ಸಿಂಗ್ ಗ್ಲೋಬಲ್ ಟಿ-20 ಕೆನಡಾ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ವೆಸ್ಟ್‌ಇಂಡೀಸ್‌ನ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್, ಆಂಡ್ರೆ ರೆಸಲ್, ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್, ಪಾಕಿಸ್ತಾನದ ಶಾಹೀದ್ ಆಫ್ರಿದಿ ಮತ್ತಿತರರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ಒ ಟ್ಟು ಆರು ತಂಡಗಳು ಭಾಗವಹಿಸುವ ಟೂರ್ನಿಯಲ್ಲಿ ಮೈದಾನದೆ ಒಳಗೆ ಮಾತ್ರವಲ್ಲದೆ ಹೊರಗಡೆಯು ಆಟಗಾರರ ಅಬ್ಬರ ನಡೆಯುತ್ತಿದೆ.
ಆಂಡ್ರೆ ರಸೆಲ್ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿರುವ ವೀಡಿಯೋದಲ್ಲಿ ಯುವಿ, ಗೇಲ್ ಸೇರಿದಂತೆ ಅನೇಕ ತಾರೆಗಳು ಮೋಜು, ಮಸ್ತಿಯಲ್ಲಿ ಭಾಗಿಯಾಗಿದ್ದಾರೆ.
ನೀರಿನಲ್ಲಿ ಬೋಟ್ ವಿಹಾರಕ್ಕೆ ತೆರಳಿರುವ ಯುವಿ, ಗೇಲ್ ಸೇರಿದ ಆಟಗಾರರು ಪಾರ್ಟಿ ಮಾಡಿದ್ದಷ್ಟೇ ಅಲ್ಲದೆ ಪಂಜಾಬಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ