ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದೆ: ಹರ್ಮನ್‌ಪ್ರೀತ್‌ ಕೌರ್‌

ವಿವಾದ ಸೃಷ್ಠಿಸಿದ್ದ 2018ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ನಂತರ ಕ್ರಿಕೆಟ್‌ ನಿಂದ ದೂರ ಉಳಿಯಲು..
ಹರ್ಮನ್‌ಪ್ರೀತ್‌ ಕೌರ್‌ - ಮಿಥಾಲಿ ರಾಜ್‌
ಹರ್ಮನ್‌ಪ್ರೀತ್‌ ಕೌರ್‌ - ಮಿಥಾಲಿ ರಾಜ್‌
Updated on
ನವದೆಹಲಿ: ವಿವಾದ ಸೃಷ್ಠಿಸಿದ್ದ 2018ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ನಂತರ ಕ್ರಿಕೆಟ್‌ ನಿಂದ ದೂರ ಉಳಿಯಲು ಮುಂದಾಗಿದ್ದೆ ಎಂದು ಭಾರತ ಚುಟುಕು ಮಾದರಿ ನಾಯಕಿ ಹರ್ಮನ್‌ಪ್ರೀತ್‌ ಕೌರ್ ಅವರು ಕಳೆದ ವರ್ಷದ ಸಂಗತಿಯೊಂದನ್ನು ಬಹಿರಂಗ ಪಡೆಸಿದ್ದಾರೆ.
ವೆಸ್ಟ್‌ ಇಂಡೀಸ್‌ ನಲ್ಲಿ ನಡೆದಿದ್ದ ಚುಟುಕು ವಿಶ್ವಕಪ್‌ ಟೂರ್ನಿಯ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್‌ ಮಹಿಳಾ ತಂಡದ ವಿರುದ್ಧ ಹಿರಿಯ ಬ್ಯಾಟ್ಸ್‌ವುಮೆನ್ ಮಿಥಾಲಿ ರಾಜ್‌ ಅವರನ್ನು ಆಡಿಸಿರಲಿಲ್ಲ. ಈ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇವರನ್ನು ಆಯ್ಕೆ ಮಾಡದೆ ಇದ್ದ ಟೀಂ ಮ್ಯಾನೇಜ್‌ಮೆಂಟ್‌ ನಡೆಯನ್ನು ಹಲವರು ವಿರೋಧಿಸಿದ್ದರು.
ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದರಿಂದ ಅದೇ ತಂಡವನ್ನು ಇಂಗ್ಲೆಂಡ್‌ ವಿರುದ್ಧ ಮುಂದುವರಿಸುವುದು ನಮ್ಮ ಯೋಜನೆಯಾಗಿತ್ತು ಎಂದು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಸಮರ್ಥಿಸಿಕೊಂಡಿದ್ದರು.
ಈ ಕುರಿತು ಇಎಸ್‌ಪಿಎನ್‌ ಕ್ರಿಕ್‌ ಇನ್ಫೋಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿ, " 2018 ಟಿ-20 ಘಟನೆಯ ವಿವಾದ ನನಗೆ ತೀವ್ರ ಕುಗ್ಗಿಸಿತ್ತು. ಆದ್ದರಿಂದ ಇದರಿಂದ ಹೊರಗಡೆ ಬರಲು ಬಯಸುತ್ತಿದ್ದೇ. ಇದನ್ನು ಮುಂದಿಟ್ಟುಕೊಂಡು ಕೆಲವರು ಅನಗತ್ಯವಾಗಿ ನನ್ನ ವಿರುದ್ಧ ದೂರುತ್ತಿದ್ದಾರೆ. ಇದರ ಬದಲು ತಂಡದಲ್ಲಿನ ಕೆಲ ಅನಗತ್ಯ ಸಂಗತಿಗಳನ್ನು ಹೊರಹಾಕಿ. ನಾನಿಲ್ಲಿರುವುದು ಕ್ರಿಕೆಟ್‌ ಆಡಲು ಮಾತ್ರ" ಎಂದು ಹೇಳಿದ್ದಾರೆ.
"ತಂಡದಲ್ಲಿ ಆರೋಗ್ಯಕರ ವಾತಾವರಣ ಉಂಟಾಗುತ್ತದೆ ಎಂದಾದರೆ, ನಾನು ಕ್ಷಮೆ ಕೇಳಲು ಸಿದ್ಧಳಿದ್ದೇನೆ. ಇದಕ್ಕೂ ಮೊದಲು ಕ್ಷಮೆ ಕೇಳಿದ್ದೇನೆ. ಜನರು ಕೇಳಲಿ ಬಿಡಲಿ ನಾನು ಕ್ಷಮೇ ಕೋರಿದ್ದೇನೆ.
ಈ ತಪ್ಪು ಆರೋಪವನ್ನು ನಾನು ಹೊತ್ತುಕೊಂಡು ನೆಮ್ಮದಿಯಾಗಿ ನಿದ್ರೆ ಮಾಡಲಾರೆ. ಕೆಲವೊಮ್ಮೆ ಎಷ್ಟೆ ಕ್ಷಮೆ ಯಾಚಿಸಿದರೂ ಕೆಲವರು ಬದಲಾಗಲ್ಲ. ಜತೆಗೆ, ಸನ್ನಿವೇಶಗಳಲ್ಲಿಯೂ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com