
ಅನುಷ್ಕಾ ಶರ್ಮಾ ಅವರಿಗೆ ಅವಮಾನ ಮಾಡುವ ಉದ್ದೇಶವಿರಲಿಲ್ಲ ಎಂದು ಫಾರೂಖ್ ಎಂಜಿನಿಯರ್ ಹೇಳಿದ್ದಾರೆ.
ಇಂಗ್ಲೆಂಡ್ ನಲ್ಲಿ ಇತ್ತೀಚಿಗೆ ನಡೆದ 2019 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಆಯ್ಕೆದಾರರು ಟೀ ಸರ್ವ್ ಮಾಡಿದ ವಿಷಯದ ಬಗ್ಗೆ ಫಾರೂಖ್ ಎಂಜಿನಿಯರ್ ಅಸಮಾಧಾನ ವ್ಯಕ್ತಪಡಿಸಿದ್ದ ಬಗ್ಗೆ ವರದಿಗಳು ಪ್ರಕಟವಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಫಾರೂಖ್ ಎಂಜಿನಿಯರ್, ತಮಾಷೆಗಾಗಿ ಹೇಳಿದ್ದೆ. ಆದರೆ ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಲಾಗುತ್ತಿದೆ. ಪಾಪದ ಅನುಷ್ಕಾ ಶರ್ಮಾ ಅವರನ್ನು ಇದರಲ್ಲಿ ಎಳೆದುತರಲಾಗುತ್ತಿದೆ ವಿರಾಟ್ ಕೊಹ್ಲಿ ಅತ್ಯುತ್ತಮ ನಾಯಕ, ಕೋಚ್ ರವಿ ಶಾಸ್ತ್ರಿ ಅತ್ಯುತ್ತಮ ಕೋಚ್ ಎಂದು ಹೇಳಿದ್ದಾರೆ.
Advertisement