ಮಯಾಂಕ್, ಗಿಲ್ ಮಿಂಚು: ಭಾರತ 'ಸಿ'ಗೆ 232 ರನ್ ಭರ್ಜರಿ ಜಯ, ಫೈನಲ್ ಗೆ ಲಗ್ಗೆ

ಮಯಾಂಕ್ ಅಗರ್ವಾಲ್(120 ರನ್) ಮತ್ತು ಶುಭಮನ್ ಗಿಲ್(142 ರನ್) ಅವರ ಭರ್ಜರಿ ಶತಕಗಳು ಹಾಗೂ ಜಲಜ್ ಸೆಕ್ಸೇನಾ(41 ಕ್ಕೆ 7) ಅವರ ಸ್ಪಿನ್ ಮೋಡಿಯ ನೆರವಿನಿಂದ...
ಮಾಯಾಂಕ್-ಶುಭ್ಮನ್ ಗಿಲ್
ಮಾಯಾಂಕ್-ಶುಭ್ಮನ್ ಗಿಲ್
Updated on

ರಾಂಚಿ: ಮಯಾಂಕ್ ಅಗರ್ವಾಲ್(120 ರನ್) ಮತ್ತು ಶುಭಮನ್ ಗಿಲ್(142 ರನ್) ಅವರ ಭರ್ಜರಿ ಶತಕಗಳು ಹಾಗೂ ಜಲಜ್ ಸೆಕ್ಸೇನಾ(41 ಕ್ಕೆ 7) ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ಸಿ ತಂಡ ದೇವಧರ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ ಎ ವಿರುದ್ಧ 232 ರನ್ ಗಳ ಭರ್ಜರಿ ಜಯ ಸಾಧಿಸಿತು.

ಇಲ್ಲಿನ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಿ ತಂಡ ನಿಗದಿತ 50 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ 366 ರನ್ ಗಳಿಸಿ ಭಾರತ ಎ ತಂಡಕ್ಕೆ 367 ರನ್ ಗುರಿ ನೀಡಿತು. ಬಳಿಕ, ಕಠಿಣ ಗುರಿ ಹಿಂಬಾಲಿಸಿದ ಭಾರತ ಎ  ತಂಡ 29.5 ಓವರ್ ಗಳಿಗೆ 134 ರನ್ ಗಳಿಗೆ ಸರ್ವ ಪತನವಾಗುವ ಮೂಲಕ ಸೋಲು ಅನುಭವಿಸಿತು. ಆ ಮೂಲಕ ಸತತ ಎರಡು ಪಂದ್ಯಗಳಲ್ಲಿ ವಿಹಾರಿ ಪಡೆ ಸೋಲು ಅನುಭವಿಸಿತು.

ಭಾರತ ಸಿ ನೀಡಿದ ಕಠಿಣ ಗುರಿ ಹಿಂಬಾಲಿಸಿದ ಭಾರತ ಎ ತಂಡ ಜಲಜ್ ಸೆಕ್ಸೇನಾ ಅವರ ಸ್ಪಿನ್ ಮೋಡಿಗೆ ಮಕಾಡೆ ಮಲಗಿತು. ಈಗಾಗಲೇ ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ  ಹನುಮ ವಿಹಾರಿ ಪಡೆ ಇಂದು ಕೂಡ ತನ್ನ ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತು. 9.5 ಓವರ್ ಬೌಲಿಂಗ್ ಮಾಡಿದ ಜಲಜ್ ಸೆಕ್ಸೇನಾ 41 ರನ್ ನೀಡಿ ಏಳು ವಿಕೆಟ್ ಪಡೆದು ಭಾರತ ಎ ಬಹುಬೇಗ ಕುಸಿಯಲು ಕಾರಣರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com