ದೇವಧರ್ ಟ್ರೋಫಿ: ಕೇದಾರ್, ಗೌತಮ್ ಮಿಂಚಿಂಗ್, ಭಾರತ ಬಿ ಚಾಂಪಿಯನ್

ಅನುಭವಿ ಕೇದಾರ್ ಜಾದವ್ (86) ಹಾಗೂ ಶಹಬಾಜ್ ನದೀಮ್ (32ಕ್ಕೆ 4) ಅವರ ಭರ್ಜರಿ ಆಟದ ನೆರವಿನಿಂದ ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಬಿ ತಂಡ 51 ರನ್ ಗಳಿಂದ ಭಾರತ ಸಿ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ದೇವಧರ್ ಟ್ರೋಫಿ: ಕೇದಾರ್, ಗೌತಮ್ ಮಿಂಚಿಂಗ್, ಭಾರತ ಬಿ ಚಾಂಪಿಯನ್
ದೇವಧರ್ ಟ್ರೋಫಿ: ಕೇದಾರ್, ಗೌತಮ್ ಮಿಂಚಿಂಗ್, ಭಾರತ ಬಿ ಚಾಂಪಿಯನ್
Updated on

10 ವರ್ಷಗಳ ವಿರಾಟ್​ ಕೊಹ್ಲಿ ದಾಖಲೆ ಮುರಿದ ಗಿಲ್

ರಾಂಚಿ: ಅನುಭವಿ ಕೇದಾರ್ ಜಾದವ್ (86) ಹಾಗೂ ಶಹಬಾಜ್ ನದೀಮ್ (32ಕ್ಕೆ 4) ಅವರ ಭರ್ಜರಿ ಆಟದ ನೆರವಿನಿಂದ ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಬಿ ತಂಡ 51 ರನ್ ಗಳಿಂದ ಭಾರತ ಸಿ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಭಾರತ ಬಿ 50 ಓವರ್ ಗಳಲ್ಲಿ 7 ವಿಕೆಟ್ ಗೆ 283 ರನ್ ಕಲೆ ಹಾಕಿತು. ಭಾರತ ಸಿ 50 ಓವರ್ ಗಳಲ್ಲಿ 9 ವಿಕೆಟ್ ಗೆ 232 ರನ್ ಸೇರಿಸಿತು.

ಸಿ ತಂಡದ ಪರ ಸ್ಟಾರ್ ಆಟಗಾರ ಪ್ರಿಯಂ ಗರ್ಗ್ ಅವರು ತಂಡಕ್ಕೆ ಆಸರೆಯಾದರು. 77 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 74 ರನ್ ಬಾರಿಸಿದರು. ಉಳಿದಂತೆ ಅಕ್ಷರ್ ಪಟೇಲ್ (38), ಜಲಜ್ ಸಕ್ಸೆನಾ (37), ಮಯಾಂಕ್ ಮರ್ಕಾಂಡೆ (27) ತಂಡಕ್ಕೆ ಆಸರೆಯಾದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್ ಮನ್ ರನ್ ಕಲೆ ಹಾಕುವಲ್ಲಿ ವಿಫಲರಾದರು.  ಬಿ ತಡದ ಪರ  ಶಬಾಜ್ ನದೀಮ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಇದಕ್ಕೆ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಬಾರತ  ‘ಬಿ’ ತಂಡ ಆರಂಭಿಕ ಆಘಾತ ಅನುಭವಿಸಿಯೂ ಉತ್ತಮ ಆಟ ಪ್ರದರ್ಶಿಸಿತ್ತು.  ಜೈಸ್ವಾಲ್ ಮತ್ತು ಕೇದಾರ್ ಜಾಧವ್ ಅರ್ಧ ಶತಕ, ವಿಜಯ್ ಶಂಕರ್ ಮತ್ತು ಕೃಷ್ಣಪ್ಪ ಗೌತಮ್ ಉತ್ತಮ ಜತೆಯಾಟ ತಂಡಕ್ಕೆ ಪ್ಲಸ್ ಆಗಿತ್ತು. ಗೌತಮ್ 10 ಎಸೆತಗಳಲ್ಲಿ 3 ಸಿಕ್ಕರ್, 3 ಬೌಂಡರಿ ಸಿಡಿಸಿ 35 ರನ್ ಗಳಿಸಿ ಮಿಂಚಿದರು.

ಇನ್ನು ಸಿ ತಂಡದ ಇಶಾನ್ ಪೋರೆಲ್ 5 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದ್ದರು.

ಸಂಕ್ಷಿಪ್ತ ಸ್ಕೋರ್

ಭಾರತ ಬಿ 50 ಓವರ್​ನಲ್ಲಿ 283/7
(ಕೇದಾರ್ ಜಾಧವ್ 86, ಯಶಸ್ವಿ ಜೈಸ್ವಾಲ್ 54, ವಿಜಯ್ ಶಂಕರ್ 45, ಕೆ. ಗೌತಮ್ ಅಜೇಯ 35, ನಿತೀಶ್ ರಾಣಾ 20 ರನ್ – ಇಶಾನ್ ಪೊರೆಲ್ 43/5)

ಭಾರತ ಸಿ 50 ಓವರ್​ನಲ್ಲಿ 232/9
(ಪ್ರಿಯಮ್ ಗರ್ಗ್ 74, ಅಕ್ಸರ್ ಪಟೇಲ್ 38, ಜಲಜ್ ಸಕ್ಸೇನಾ ಅಜೇಯ 37, ಮಯಂಕ್ ಅಗರ್ವಾಲ್ 28, ಮಯಂಕ್ ಮರ್ಕಂಡೆ 27 ರನ್ – ಶಬಾಜ್ ನದೀಮ್ 32/4, ಮೊಹಮ್ಮದ್ ಸಿರಾಜ್ 43/2)

10 ವರ್ಷಗಳ ವಿರಾಟ್​ ಕೊಹ್ಲಿ ದಾಖಲೆ ಪತನ

ಸಿ ತಂಡದ ನಾಯಕ ಶುಭ್​ಮಾನ್​ ಗಿಲ್​ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಭಾರತದ ಅತಿಕಿರಿಯ ವಯಸ್ಸಿನ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಹತ್ತು ವರ್ಷದ ಹಿಂದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬರೆದ ದಾಕಲೆಯನ್ನು ಮುರಿದಿದ್ದಾರೆ. ಕೊಹ್ಲಿ 009-10ರಲ್ಲಿ ದೇವಧರ್​ ಟ್ರೋಫಿ ಟೂರ್ನಿಯಲ್ಲಿ ಉತ್ತರ ವಲಯ ತಂಡದ ನಾಯಕನ್ಬಾಗಿದ್ದಾಗ ಅವರಿಗೆ 21 ವರ್ಷ 124 ದಿನವಾಗಿತ್ತು.  ಇಂದು ತಂಡದ ನಾಯಕನಾಗಿರುವ ಶುಭ್​ಮಾನ್​ ಗಿಲ್​ ಅವರ ವಯಸ್ಸು 20 ವರ್ಷ 57 ದಿನಗಳಾಗಿದೆ.ಇದರಿಂದಾಗಿ ಕೊಹ್ಲಿ ದಾಖಲೆ ಭಂಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com