ಸಂಗ್ರಹ ಚಿತ್ರ
ಕ್ರಿಕೆಟ್
ಕಿಲಾಡಿ ಕೀಪರ್: ಸಹ ಬ್ಯಾಟ್ಸ್‌ಮನ್‌ಗೆ ಶುಭ ಕೋರಲು ಕ್ರಿಸ್ ಬಿಟ್ಟ ದಾಂಡಿಗನ ವಿಚಿತ್ರ ರನೌಟ್, ವಿಡಿಯೋ ವೈರಲ್!
ಅರ್ಧ ಶತಕ ಸಿಡಿಸಿದ ಬ್ಯಾಟ್ಸ್ ಮನ್ ಗೆ ಶುಭ ಕೋರಲು ಕ್ರಿಸ್ ಬಿಟ್ಟು ಹೋದ ದಾಂಡಿಗನನ್ನು ಚಾಕುಚಕ್ಯತೆಯಿಂದ ಕೀಪರ್ ರನೌಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಲಖನೌ: ಅರ್ಧ ಶತಕ ಸಿಡಿಸಿದ ಬ್ಯಾಟ್ಸ್ ಮನ್ ಗೆ ಶುಭ ಕೋರಲು ಕ್ರಿಸ್ ಬಿಟ್ಟು ಹೋದ ದಾಂಡಿಗನನ್ನು ಚಾಕುಚಕ್ಯತೆಯಿಂದ ಕೀಪರ್ ರನೌಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಲಖನೌನಲ್ಲಿ ಆಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ಏಕದಿನ ಕ್ರಿಕೆಟ್ ಸರಣಿ ನಡೆಯತ್ತಿದ್ದು ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ ಇಕ್ರಾಮ್ ಅಲಿ ಖಿಲ್ ವಿಚಿತ್ರವಾಗಿ ರನೌಟ್ ಆದ ಬ್ಯಾಟ್ಸ್ ಮನ್.
ಸಹ ಆಟಗಾರ ರಹಮತ್ ಶಾ ಅರ್ಧ ಶತಕ ಸಿಡಿಸಿದ್ದು ಈ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರಲು ಇಕ್ರಾಮ್ ಮುಂದಾಗುತ್ತಾರೆ. ಇದನ್ನು ಗಮನಿಸಿದ ವಿಂಡೀಸ್ ಕೀಪರ್ ಶಾಹಿ ಹೋಪ್ ಚೆಂಡನ್ನು ವಿಕೆಟ್ ಗೆ ಬಡಿದು ರನೌಟ್ ಮಾಡಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ಘಾನಿಸ್ತಾನ 194 ರನ್ ಪೇರಿಸಿತ್ತು ಸಾಧಾರಣ ಮೊತ್ತ ಬೆನ್ನಟ್ಟಿದ ವಿಂಡೀಸ್ 3 ವಿಕೆಟ್ ನಷ್ಟಕ್ಕೆ 197 ರನ್ ಪೇರಿಸಿ ಗೆಲುವಿನ ನಗೆ ಬೀರಿದೆ.
ಇನ್ನು 2006ರಲ್ಲಿ ಇದೇ ರೀತಿ ರನೌಟ್ ಗೆ ಲಂಕಾದ ಬೌಲರ್ ಮುತ್ತಯ್ಯ ಮುರಳಿಧರನ್ ಔಟ್ ಆಗಿದ್ದರು.

