ಲಖನೌ: ಆಫ್ಗಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ ವೆಸ್ಟ್ ಇಂಡೀಸ್ ನ ನಿಕೋಲಸ್ ಪೂರನ್ ಅವರಿಗೆ ಮುಂದಿನ ನಾಲ್ಕು ಪಂದ್ಯಗಳಿಗೆ ನಿಷೇಧ ಹೇರಲಾಗಿದೆ.
ನಿಕೋಲಸ್ ಚೆಂಡನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಹೊರಬಿದ್ದಿತ್ತು. ಈ ವಿಡಿಯೋವನ್ನೇ ಆಧಾರವಾಗಿಟ್ಟುಕೊಂಡು ಐಸಿಸಿ ನೀತಿ ಸಂಹಿತೆ 2.14 ಅನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪೂರನ್ ಗೆ ಮುಂದಿನ ನಾಲ್ಕು ಪಂದ್ಯಗಳಿಗೆ ನಿಷೇಧ ಹೇರಿದೆ.
ಆಫ್ಗಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ವೆಸ್ಟ್ ಇಂಡೀಸ್ ಕ್ಲೀನ್ ಸ್ವೀಪ್ ಮಾಡಿದೆ.
Advertisement