ರೋಜರ್ ಬಿನ್ನಿ
ಕ್ರಿಕೆಟ್
ಟೀಂ ಇಂಡಿಯಾ ಮಾಜಿ ಸ್ಟಾರ್ ಆಟಗಾರ ರೋಜರ್ ಬಿನ್ನಿಗೆ ಕೆಎಸ್‍ಸಿಎ ನೂತನ ಅಧ್ಯಕ್ಷ ಪಟ್ಟ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಮಾಜಿ ಸ್ಟಾರ್ ಆಟಗಾರ ರೋಜರ್ ಬಿನ್ನಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಮಾಜಿ ಸ್ಟಾರ್ ಆಟಗಾರ ರೋಜರ್ ಬಿನ್ನಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ರೋಜರ್ ಬಿನ್ನಿ ಬಣ ಕ್ಲೀನ್ ಸ್ವೀಪ್ ಮಾಡಿದೆ. ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ, ಇನ್ನು ಕೆಎಸ್‍ಸಿಎ ಅಧ್ಯಕ್ಷ. ಇವರು 943 ಮತಗಳನ್ನು ಪಡೆದರೆ, ಪ್ರತಿ ಸ್ಪರ್ಧಿ ಕ್ಯಾ.ಎಂ.ಎಂ.ಹರೀಶ್ 111 ಮತ ಪಡೆದರು.
ಉಪಾಧ್ಯಕ್ಷರಾಗಿ ಜೆ.ಅಭಿರಾಮ್ ಆಯ್ಕೆ ಆಗಿದ್ದಾರೆ. ಇವರು 885 ಮತ ಪಡೆದರು. ಜೋಸೆಫ್ ಹೂವಾರ್ 122, ಸಿದ್ದಲಿಂಗ್ ಸ್ವಾಮಿ 37 ಮತ ಪಡೆದರು.
ಗೆದ್ದ ಆಡಳಿತಾಧಿಕಾರಿಗಳು:
ಸಂತೋಷ್ ಮೆನನ್, ಕಾರ್ಯದರ್ಶಿ
ಶವೀರ್ ತರಾಪೊರೆ, ಜಂಟಿ ಕಾರ್ಯದರ್ಶಿ
ವಿನಯ್ ಮೃತ್ಯುಂಜಯ್, ಖಜಾಂಚಿ