ಅಡ್ಡ ದಾರಿಗಳ ಮೂಲಕ ಕನಸುಗಳು ಸಾಕಾರಗೊಳ್ಳುವುದಿಲ್ಲ: ಸಚಿನ್ ತೆಂಡೂಲ್ಕರ್ 

ಭಾರತೀಯ ಕ್ರಿಕೆಟ್ ದಂತ ಕತೆ ಸಚಿನ್ ಕ್ರಿಕೆಟ್‌ ವೃತ್ತಿ ಜೀವನದ ಮೊದಲ ಆಯ್ಕೆ ಪ್ರಕ್ರಿಯೆಯಲ್ಲೇ ತಾವು ತಿರಸ್ಕೃತಗೊಂಡಿದ್ದಾಗಿ  ಹೇಳಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಮುಂಬಯಿ:  ಭಾರತೀಯ ಕ್ರಿಕೆಟ್ ದಂತ ಕತೆ ಸಚಿನ್ ಕ್ರಿಕೆಟ್‌ ವೃತ್ತಿ ಜೀವನದ ಮೊದಲ ಆಯ್ಕೆ ಪ್ರಕ್ರಿಯೆಯಲ್ಲೇ ತಾವು ತಿರಸ್ಕೃತಗೊಂಡಿದ್ದಾಗಿ  ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶಾಲಾ ಮಕ್ಕಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು,  ''ಶಾಲಾ ದಿನಗಳಲ್ಲೇ ನನಗೆ ಭಾರತ ತಂಡದ ಪರ ಆಡುವ ಕನಸಿತ್ತು. 11ನೇ ವರ್ಷದಲ್ಲೇ ನನ್ನ ಕ್ರಿಕೆಟ್‌ ಪ್ರಯಾಣ ಆರಂಭವಾಗಿತ್ತು. ಮೊದಲ ಬಾರಿ ಆಯ್ಕೆ ಪರೀಕ್ಷೆಗೆ ಹೋಗಿದ್ದಾಗ ಆಯ್ಕೆಗಾರರು ನನ್ನನ್ನು ತಿರಸ್ಕರಿದ್ದರು. ಇನ್ನಷ್ಟು ಶ್ರಮ ಹಾಕುವಂತೆ ಹೇಳಿ ವಾಪಸ್‌ ಕಳಿಸಿದ್ದರು, ಎಂದು ಸ್ಮರಿಸಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಎರಡು ದಶಕಗಳ ಸುದೀರ್ಘ ಕ್ರಿಕೆಟ್‌ ವೃತ್ತಿಜೀವನದಲ್ಲಿ ಟೆಸ್ಟ್‌ (15,921) ಹಾಗೂ ಏಕದಿನ ಮಾದರಿ(18,426)ಗಳಲ್ಲಿಅತ್ಯಧಿಕ ರನ್‌ ಪೇರಿಸಿದ ದಾಖಲೆ ಸೇರಿದಂತೆ ಹಲವು ಚಾರಿತ್ರಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ. 

ನಾನು ವಿದ್ಯಾರ್ಥಿಯಾಗಿದ್ದಾಗ ಭಾರತಕ್ಕಾಗಿ ಆಡುವ ಕನಸನ್ನು ಹೊತ್ತುಕೊಂಡಿದ್ದೆ. 11ನೇ ವಯಸ್ಸಿನಲ್ಲಿ ಕ್ರಿಕೆಟ್ ಪ್ರಯಾಣ ಆರಂಭವಾಯಿತು. ನನಗೀಗಲೂ ನೆನಪಿದೆ, ಮೊದಲ ಬಾರಿಗೆ ಆಯ್ಕೆಗೆ ಹೋದಾಗ ನನ್ನನ್ನು ಆಯ್ಕೆದಾರರು ತಿರಸ್ಕರಿಸಿದ್ದರು ಎಂದು ಹಳೆಯ ನೆನಪುಗಳನ್ನು ನೆನಪಿಸಿಕೊಂಡರು. 

ಆ ಸಂದರ್ಭದಲ್ಲಿ ನಾನು ಸಾಕಷ್ಟು ನಿರಾಸೆಗೊಂಡಿದ್ದೆ. ಏಕಂದರೆ ನಾನು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೆ ಎಂದು ಭಾವಿಸುತ್ತೇನೆ. ಆದರೆ ಫಲಿತಾಂಶವು ನಾನು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಮೊದಲ ಬಾರಿಗೆ ನಾನು ಆಯ್ಕೆಯಾಗಿಲ್ಲ. ಆದರೆ ಅಲ್ಲಿಂದ ಬಳಿಕ ನನ್ನ ಗಮನ, ಬದ್ಧತೆ ಮತ್ತು ಕಠಿಣ ಪರಿಶ್ರಮ ಮಾಡುವ ಸಾಮರ್ಥ್ಯ ಮತ್ತಷ್ಟು ಹೆಚ್ಚಾಯಿತು. ನಿಮ್ಮ ಕನಸುಗಳನ್ನು ಸಾಕಾರಗೊಳ್ಳಲು ಬಯಸುವುದಾದರೆ, ಅಡ್ಡ-ದಾರಿಗಳು ಎಂದಿಗೂ ಸಹಾಯ ಮಾಡುವುದಿಲ್ಲ ಎಂದು ಸಚಿನ್ ಉಲ್ಲೇಖಿಸಿದರು. 

ಕ್ರಿಕೆಟ್‌ನಲ್ಲಿ ನನ್ನ ಯಶಸ್ಸಿಗೆ ಕುಟುಂಬದ ಎಲ್ಲ ಸದಸ್ಯರಿಗೆ ಋಣಿಯಾಗಿದ್ದೇನೆ. ನನ್ನ ಹೆತ್ತವರು, ನನ್ನ ಸೋದರ ಅಜಿತ್, ಹಿರಿಯ ಸೋದರ ನಿತಿನ್ ನನಗೆ ಬೆಂಬಲ ನೀಡಿದರು. ನನ್ನ ಹಿರಿಯಕ್ಕ ಸಹ  ಬೆಂಬಲಿಸಿದರು. ವಾಸ್ತವವಾಗಿ, ಅಕ್ಕ ನನ್ನ ಜೀವನದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com