ಪಾಕ್ ತಂಡದ ಮುಖ್ಯ ಕೋಚ್ ಆಗಿ ಮಿಸ್ಬಾ ಉಲ್‌ ಹಕ್‌ ಆಯ್ಕೆ

ಮಾಜಿ ನಾಯಕ ಮಿಸ್ಬಾ ಉಲ್‌ ಹಕ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಹಾಗೂ ಆಯ್ಕೆದಾರರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇಂದಿನಿಂದ ಅವರ ಸೇವೆ ಆರಂಭವಾಗಲಿದೆ ಎಂದು ಪ್ರಕಟಿಸಿದೆ.
ಮಿಸ್ಬಾ ಉಲ್‌ ಹಕ್‌
ಮಿಸ್ಬಾ ಉಲ್‌ ಹಕ್‌

ಕರಾಚಿ: ಮಾಜಿ ನಾಯಕ ಮಿಸ್ಬಾ ಉಲ್‌ ಹಕ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಹಾಗೂ ಆಯ್ಕೆದಾರರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇಂದಿನಿಂದ ಅವರ ಸೇವೆ ಆರಂಭವಾಗಲಿದೆ ಎಂದು ಪ್ರಕಟಿಸಿದೆ.

ಮಿಸ್ಬಾ-ಉಲ್‌-ಹಕ್‌ ಅವರ ಜತೆ ರಾಷ್ಟ್ರೀಯ ತಂಡದ ಬೌಲಿಂಗ್‌ ಕೋಚ್‌ ಆಗಿ ವಖಾರ್‌ ಯೂನಿಸ್‌ ಅವರನ್ನು ಮೂರು ವರ್ಷಗಳವರೆಗೂ ನೇಮಕ ಮಾಡಲಾಗಿದೆ. ಇವರಿಬ್ಬರನ್ನೂ ಇಂತಿಕಾಬ್ ಅಲಾಮ್ (ಮಾಜಿ ನಾಯಕ), ಬಾಜಿದ್‌ ಖಾನ್‌ (ಮಾಜಿ ಕ್ರಿಕೆಟಿಗ), ಅಸಾದ್‌ ಅಲಿ ಖಾನ್‌ (ಬೋರ್ಡ್‌ ಆಫ್‌ ಗರ್ವನರ್‌ನ ಸದಸ್ಯ) ವಾಸೀಮ್‌ ಖಾನ್‌ (ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಹಾಗೂ ಝಾಕೀರ್‌ ಖಾನ್‌ (ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿರ್ದೇಶಕರು) ಅವರನ್ನೊಳಗೊಂಡ ಐದು ಸದಸ್ಯರ ಸಮಿತಿಯು ಮಿಜ್ಬಾ ಹಾಗೂ ವಖಾರ್‌ ಅವರನ್ನು ಆಯ್ಕೆ ಮಾಡಿ ಅಂತಿಮಗೊಳಿಸಿದೆ. 
  
"ಈ ಹಿಂದೆ ಪಾಕಿಸ್ತಾನದ ರಾಷ್ಟ್ರೀಯ ತಂಡಗಳಿಗೆ ಕೋಚ್‌ ಆಗಿ ಸೇವೆ ಸಲ್ಲಿಸಿದ ಪ್ರತಿಫಲವಾಗಿ ಇಂದು ಆಯ್ಕೆ ಸಮಿತಿಗೆ ಸೇರ್ಪಡೆಯಾಗುತ್ತಿರುವುದಕ್ಕೆ ಖುಷಿಯಿದೆ. ಇದು ಒಂದು ದೊಡ್ಡ ಗೌರವ ಮತ್ತು ಅದಕ್ಕಿಂತ ಹೆಚ್ಚಾಗಿ ನಾವು ಕ್ರಿಕೆಟ್‌ನಲ್ಲಿ ಉಸಿರಾಡುವುದು ಒಂದು ದೊಡ್ಡ ಜವಾಬ್ದಾರಿ." ಎಂದು ಮಿಸ್ಬಾ-ಉಲ್‌ ಹಕ್‌ ಹೇಳಿದರು. 

"ನಿರೀಕ್ಷೆಗಳು ಹೆಚ್ಚಿವೆ ಎಂದು ನನಗೆ ತಿಳಿದಿದೆ. ಆದರೆ, ಇವುಗಳನ್ನು ಸಕಾರಗೊಳಿಸಲು ನಾನು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ. ಇಲ್ಲದಿದ್ದರೆ ನಾನು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಅತ್ಯಂತ ಸವಾಲಿನ ಮತ್ತು ಅಪೇಕ್ಷಿತ ಪಾತ್ರವೊಂದಕ್ಕೆ ನನ್ನ ಹೆಸರನ್ನು ಮಣೆ ಹಾಕುತ್ತಿರಲಿಲ್ಲ' ಎಂದು ತಿಳಿಸಿದ್ದಾರೆ. 

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಹಾಗೂ ಮೂರು ಪಂದ್ಯಗಳ ಟಿ-20 ತವರು ಸರಣಿ ಮಿಸ್ಬಾ ಉಲ್‌ ಹಕ್‌ ಹಾಗೂ ವಖಾರ್‌ ಯೂನಿಸ್‌ ಅವರಿಗೆ ಮೊದಲ ಪರೀಕ್ಷೆ ಆಗಲಿದೆ.
 
ಮಿಸ್ಬಾ-ಉಲ್-ಹಕ್‌ ಅವರು 75 ಟೆಸ್ಟ್‌ ಪಂದ್ಯಗಳಿಂದ 5,222 ರನ್‌ ಗಳಿಸಿದ್ದು, ಇದರಲ್ಲಿ 10 ಶತಕ ಹಾಗೂ 39 ಅರ್ಧ ಶತಕ ಸಿಡಿಸಿದ್ದಾರೆ. 162 ಏಕದಿನ ಪಂದ್ಯಗಳಿಂದ 42 ಅರ್ಧ ಶತಕಗಳೊಂದಿಗೆ 5,122 ರನ್‌ ದಾಖಲಿಸಿದ್ದಾರೆ. 39 ಟಿ-20 ಪಂದ್ಯಗಳಿಂದ 788 ರನ್‌ ಕಲೆ ಹಾಕಿದ್ದಾರೆ. ವಖಾರ್‌ ಯೂನಿಸ್‌ ಅವರು 87 ಟೆಸ್ಟ್‌ ಪಂದ್ಯಗಳಿಂದ 373 ವಿಕೆಟ್‌ ಕಿತ್ತಿದ್ದಾರೆ. ಜತೆಗೆ, 262 ಏಕದಿನ ಪಂದ್ಯಗಳಿಂದ ಒಟ್ಟು 416 ವಿಕೆಟ್‌ ಉರುಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com