ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ: ಪ್ರಮುಖ ಆರೋಪಿ ಬುಕ್ಕಿ ಸಯ್ಯಾಂ ವಿದೇಶಕ್ಕೆ ಪಲಾಯನ!

ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ಮ್ಯಾಚ್ ಫಿಕ್ಸಿಂಗ್‌ನ ಪ್ರಮುಖ ಆರೋಪಿ ಬುಕ್ಕಿ ಸಯ್ಯಾಂ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ಮ್ಯಾಚ್ ಫಿಕ್ಸಿಂಗ್‌ನ ಪ್ರಮುಖ ಆರೋಪಿ ಬುಕ್ಕಿ ಸಯ್ಯಾಂ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಬೆಂಗಳೂರು ಸಿಸಿಬಿ ಪೊಲೀಸರು ಐಪಿಎಲ್ ಮ್ಯಾಕ್ಸ್ ಫಿಕ್ಸಿಂಗ್ ಪ್ರಕರಣ ತನಿಖೆ ಚುರುಕುಗೊಳಿಸುತ್ತಿದ್ದಂತೆ ಆರೋಪಿ ಸಯ್ಯಾಂ ವಿದೇಶಕ್ಕೆ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಫಿಕ್ಸಿಂಗ್‌ ಪ್ರಕರಣ್ಕಕೆ ಸಂಬಂಧಿಸಿ ಹಲವು ರಹಸ್ಯ ಮಾಹಿತಿಗಳು ಸಯ್ಯಾಂ ಬಳಿ ಇದ್ದವು. ಆತ ಪೊಲೀಸರಿಗೆ ಸಿಕ್ಕಿದ್ದರೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿತ್ತು ಎನ್ನಲಾಗಿದೆ.

ಇದೀಗ ಬುಕ್ಕಿ ಸಯ್ಯಾಂ ವಿರುದ್ಧ ಸಿಸಿಬಿ ಲುಕ್​ಔಟ್​ ನೋಟಿಸ್​ ಜಾರಿ ಮಾಡಿದೆ.ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಈತನ ಕುರಿತು ಮಾಹಿತಿ ರವಾನಿಸಲಾಗಿದೆ. ಅಲ್ಲದೆ ಆತನ ಪತ್ತೆಯಾಗಿದ್ದರೆ ಮಾಹಿತಿ ನೀಡಲು ಕೋರಲಾಗಿದೆ.

ಸಧ್ಯ ಸಿಸಿಬಿ ಪೋಲೀಸರು ಬುಕ್ಕಿಗಳಾದ ಮನೋಜ್ ಯಾನೆ ಮೌಂಟಿ ದೆಹಲಿಯ ಖಾನ್ ಹಾಗೂ ವೆಂಕಿ ಮೇಲೆ ಸಹ ನಿಗಾ ಇರಿಸಿದ್ದಾರೆ. ಪರಾರಿಯಾಗಿರುವ ಸಯ್ಯಾಂ ಅಂತರಾಷ್ಟ್ರೀಯ ಆಟಗಾರರೊಡನೆ ಸಹ ಸಂಪರ್ಕ ಹೊಂದಿದ್ದನೆಂಬ ಶಂಕೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com