ಶಫಾಲಿ- ಸ್ಮೃತಿ ಭರ್ಜರಿ ಆಟ: ಟೀಂ ಇಂಡಿಯಾಗೆ 84 ರನ್ ಜಯ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ, ಆತಿಥೇಯ ತಂಡದ ವಿರುದ್ಧ ಐದು ಟಿ-20 ಪಂದ್ಯದ ಸರಣಿಯ ಮೊದಲ ಪಂದ್ಯದಲ್ಲಿ 84 ರನ್ ಗೆಲುವು ದಾಖಲಿಸಿದೆ.

Published: 10th November 2019 04:42 PM  |   Last Updated: 10th November 2019 04:42 PM   |  A+A-


India-West Indies

ಭಾರತ-ವಿಂಡೀಸ್

Posted By : Vishwanath S
Source : UNI

ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ, ಆತಿಥೇಯ ತಂಡದ ವಿರುದ್ಧ ಐದು ಟಿ-20 ಪಂದ್ಯದ ಸರಣಿಯ ಮೊದಲ ಪಂದ್ಯದಲ್ಲಿ 84 ರನ್ ಗೆಲುವು ದಾಖಲಿಸಿದೆ.

ಭಾರತದ ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಅವರು ತಂಡಕ್ಕೆ ಸ್ಪೋಟಕ ಆರಂಭ ನೀಡಿದರು. ಈ ಜೋಡಿ ತಂಡ ಹಾಕಿಕೊಂಡ ಯೋಜನೆಯಂತೆ ಬ್ಯಾಟಿಂಗ್ ನಡೆಸಿತು. ಈ ಜೋಡಿಯನ್ನು ಬೇರ್ಪಡಿಸಲು ವಿಂಡೀಸ್ ಬೌಲರ್ ಗಳು ಹೈರಾಣಾದರು. ಮೊದಲ ವಿಕೆಟ್ ಗೆ ಆರಂಭಿಕರು 15.3 ಓವರ್ ಗಳಲ್ಲಿ 143 ರನ್ ಕಾಣಿಕೆ ನೀಡಿದರು. 

ಭಾರತದ ಪರ ಬ್ಯಾಟಿಂಗ್ ನಲ್ಲಿ ಶಫಾಲಿ ವರ್ಮಾ 73, ಸ್ಮೃತಿ ಮಂದಾನ 67, ಹರ್ಮನ್ ಪ್ರೀತ್ ಕೌರ್ ಅಜೇಯ 21 ಮತ್ತು ವಿ ಕೃಷ್ಣಮೂರ್ತಿ ಅಜೇಯ 15 ರನ್ ಪೇರಿಸಿದ್ದಾರೆ. 

ವಿಂಡೀಸ್ ಪರ ಬ್ಯಾಟಿಂಗ್ ನಲ್ಲಿ ಮ್ಯಾಥ್ಯೂಸ್ 13, ಕ್ಯಾಂಪ್ ಬೆಲ್ಲೆ 33, ನೇಷನ್ 10, ನೈಟ್ 12, ಕಿಂಗ್ 13 ರನ್ ಪೇರಿಸಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp