ಕೊರೋನಾ ವಿರುದ್ಧದ ಹೋರಾಟಕ್ಕೆ 50 ಲಕ್ಷ ನೀಡಿದ್ದ ಸಚಿನ್‌ರಿಂದ ಮತ್ತೊಂದು ಮಹತ್ಕಾರ್ಯ!

ಭಾರತದ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಮಹಾಮಾರಿ ಕೊರೋನಾ ವಿರುದ್ಧದ ಹೋರಾಟಕ್ಕೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ್ದರು. ಆದರೆ ಇದೀಗ ಮತ್ತೊಂದು ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.
ಸಚಿನ್ ತೆಂಡೂಲ್ಕರ್

ದೇಶದಲ್ಲಿ 21 ದಿನ ಲಾಕ್ ಡೌನ್ ಘೋಷಿಸಿರುವುದರಿಂದ ದೇಶದಲ್ಲಿ ಹಸಿವಿನ ಹೊಟ್ಟೆಗಳು ಜಾಸ್ತಿಯಾಗುತ್ತಿದ್ದು ಈ ನಿಟ್ಟಿನಲ್ಲಿ ತಿಂಗಳಲ್ಲಿ 5000 ಮಂದಿಗೆ ಹಸಿವು ನೀಗಿಸಲು ಮುಂದಾಗಿದ್ದಾರೆ. 

ಹೌದು, ಅಪ್ನಾಲಯ ಎಂಬ ಎನ್ಜಿಒ ಒಂದು ನಿರ್ಗತಿಕರಿಗೆ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದು ಈ ಸಂಸ್ಧೆಯ ಮುಂದಿನ ಒಂದು ತಿಂಗಳ ಕಾಲ ಬೇಕಾಗುವ ಪಡಿತರವನ್ನು ಸಚಿನ್ ಅವರೇ ನೋಡಿಕೊಳ್ಳಲಿದ್ದಾರೆ. 

ಈ ಬಗ್ಗೆ ಅಪ್ನಾಲಯ ಟ್ವೀಟ್ ಮಾಡಿ ಸಚಿನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದೆ. ಈ ವೇಳೆ ಕೈಲಾದವರು ಸಹಾಯ ಹಸ್ತ ಚಾಚಬೇಕು ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com