
ನವದೆಹಲಿ: ಕೊರೋನಾ ವೈರಸ್ ನಡುವೆಯೂ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಧಾನವಾಗಿ ಗರಿ ಗೆದರುತ್ತಿದೆ. ಈ ಸಮಯದಲ್ಲಿ ಟ್ವಿಟರ್‌ನಲ್ಲಿ ಚುರುಕಾಗಿರುವ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅಭಿಮಾನಿಗಳು ತಮ್ಮ ವೃತ್ತಿ ಬದುಕು ಮತ್ತು ಖಾಸಗಿ ಜೀವನದ ಬಗ್ಗೆ ಕೇಳುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಅಫ್ರಿದಿ ಅವರನ್ನು ಕೇಳಲಾದ ಪ್ರಶ್ನೆ ಏನೆಂದರೆ, ಅವರ ಆಯ್ಕೆಯ ನೆಚ್ಚಿನ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಯಾರು? ಎಂಬುದು. ಇದಕ್ಕೆ ಉತ್ತರಿಸಿದ ಆಲ್‌ರೌಂಡರ್, ತಮ್ಮ ವೃತ್ತಿಬದುಕಿನಲ್ಲಿ ಸಾಕಷ್ಟು ಸಮಯ ಎದುರಾಳಿಗಳಾಗಿ ಆಡಿದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜರ ಹೆಸರನ್ನು ಹೇಳದೆ ಹಾಲಿ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರನ್ನು ತೆಗೆದುಕೊಂಡಿದ್ದಾರೆ.
Advertisement