ಟೀಂ ಇಂಡಿಯಾ ಉಪನಾಯಕ, ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ 'ಖೇಲ್ ರತ್ನ' ಪ್ರಶಸ್ತಿಗೆ ಶಿಫಾರಸು

ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಟೀಂ ಇಂಡಿಯಾ ಉಪನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೆಸರನ್ನು  ಶಿಫಾರಸು ಮಾಡಲಾಗಿದೆ. ಒಟ್ಟೂ ನಾಲ್ವರ ಹೆಸರನ್ನು ಅತ್ಯುನ್ನತ ಗೌರವಕ್ಕಾಗಿ ಶಿಫಾರಸು ಮಾಡಲಾಗಿದ್ದು ಅದರಲ್ಲಿ ಶರ್ಮಾ ಹೆಸರೂ ಇದೆ
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಟೀಂ ಇಂಡಿಯಾ ಉಪನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೆಸರನ್ನು  ಶಿಫಾರಸು ಮಾಡಲಾಗಿದೆ. ಒಟ್ಟೂ ನಾಲ್ವರ ಹೆಸರನ್ನು ಅತ್ಯುನ್ನತ ಗೌರವಕ್ಕಾಗಿ ಶಿಫಾರಸು ಮಾಡಲಾಗಿದ್ದು ಅದರಲ್ಲಿ ಶರ್ಮಾ ಹೆಸರೂ ಇದೆ,

ರೋಹಿತ್ ಶರ್ಮಾ ಅವರೊಂದಿಗೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್,  ಟೇಬಲ್ ಟೆನಿಸ್ ಚಾಂಪಿಯನ್ ಮಾನಿಕಾ ಬಾತ್ರಾ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಮತ್ತಿತರೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನಿರ್ಧರಿಸಲು ಆಯ್ಕೆ ಸಮಿತಿ ಮಂಗಳವಾರ ಸಭೆ ಸೇರಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com