ಮಾಜಿ ಕ್ರಿಕೆಟಿಗ ಕಸ್ತೂರಿ ರಂಗನ್ ನಿಧನ

ಹಿರಿಯ ಕ್ರಿಕೆಟಿಗ ಕಸ್ತೂರಿ ರಂಗನ್ (90) ವಯೋಸಹಜ ಕಾಯಿಲೆಯಿಂದ ಬಳಲಿ ನಿಧನರಾಗಿದ್ದಾರೆ.
ಕಸ್ತೂರಿ ರಂಗನ್
ಕಸ್ತೂರಿ ರಂಗನ್

ಬೆಂಗಳೂರು: ಹಿರಿಯ ಕ್ರಿಕೆಟಿಗ ಕಸ್ತೂರಿ ರಂಗನ್ (90) ವಯೋಸಹಜ ಕಾಯಿಲೆಯಿಂದ ಬಳಲಿ ನಿಧನರಾಗಿದ್ದಾರೆ.

ಕರ್ನಾಟಕ ತಂಡದ ಮಾಜಿ ಆಟಗಾರ, ಬಿಸಿಸಿಐ ಕ್ಯೂರೆಟರ್, ಕೆಎಸ್ ಸಿಎ ಉಪಾಧ್ಯಕ್ಷ ರಾಗಿ ಕಸ್ತೂರಿ ರಂಗನ್ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಿರ್ಮಿಸಿದ ಹೆಮ್ಮೆ ಇವರದ್ದಾಗಿದೆ.

“ಜಿ ಕಸ್ತುರಿರಂಗನ್ ಇಂದು ಬೆಳಿಗ್ಗೆ ನಿಧನರಾದರು. ಅವರು ಚಾಮರಾಜಪೇಟೆಯಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ”ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಖಜಾಂಚಿ ಮತ್ತು ವಕ್ತಾರ ವಿನಯಾ ಮೃತ್ಯುಂಜಯ ತಿಳಿಸಿದ್ದಾರೆ.

ಕಸ್ತುರಿರಂಗನ್ ಮೈಸೂರು ಪರ ರಣಜಿ ಟ್ರೋಫಿಯಲ್ಲಿ ಬಲಗೈ ಮಧ್ಯಮ ವೇಗದ ಬೌಲರ್ ಆಗಿ 1948 ರಿಂದ 1963 ರವರೆಗೆ ಆಡಿದ್ದರು ಎಂದು ಮೂಲಗಳು ತಿಳಿಸಿವೆ.

ಅವರ ನಿಧನಕ್ಕೆ ಸಂತಾಪ ಸೂಚಿಸಿದ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, “ಜಿ ಕಸ್ತುರಿರಂಗನ್ ಅವರ ನಿಧನದ ಬಗ್ಗೆ ಕೇಳಲು ಬೇಸರವಾಗಿದೆ. ಕ್ರಿಕೆಟ್‌ಗೆ ಅವರು ನೀಡಿದ ಎಲ್ಲ ಕೊಡುಗೆಗಳನ್ನು ನಾನು  ಪ್ರೀತಿಯಿಂದ ಸ್ಮರಿಸುತ್ತೇನೆ. ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ  ಸಂತಾಪವಿದೆ"  ಎಂದರು. 

"ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಮಾಜಿ ರಣಜಿ ಆಟಗಾರ, ಕೆಎಸ್ಸಿಎ ಉಪಾಧ್ಯಕ್ಷ ಮತ್ತು ಬಿಸಿಸಿಐ ಕ್ಯುರೇಟರ್ಜಿ ಕಸ್ತುರಿರಂಗನ್ ಅವರ ಹಠಾತ್ ನಿಧನಕ್ಕೆ ತೀವ್ರವಾಗಿ ವಿಷಾದಿಸುತ್ತೇವೆ"  ಕೆಎಸ್ಸಿಎ ಟ್ವೀಟ್ ಮೂಲಕ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com