ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದು ವಿಶ್ವದಾಖಲೆ ಬರೆದ ಡ್ವೇನ್ ಬ್ರಾವೋ

ಜೇಮ್ಸ್ ಆಂಡರ್ಸನ್ 600 ಟೆಸ್ಟ್ ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡ ಒಂದು ದಿನದ ನಂತರ, 500 ಟ್ವೆಂಟಿ -20 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಡ್ವೇನ್ ಬ್ರಾವೋ ಪಾತ್ರರಾಗಿದ್ದಾರೆ. 
ಡ್ವೇನ್ ಬ್ರಾವೋ
ಡ್ವೇನ್ ಬ್ರಾವೋ
Updated on

ಪೋರ್ಟ್ ಆಫ್ ಸ್ಪೇನ್: ಜೇಮ್ಸ್ ಆಂಡರ್ಸನ್ 600 ಟೆಸ್ಟ್ ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡ ಒಂದು ದಿನದ ನಂತರ, 500 ಟ್ವೆಂಟಿ -20 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಡ್ವೇನ್ ಬ್ರಾವೋ ಪಾತ್ರರಾಗಿದ್ದಾರೆ.

36 ವರ್ಷದ ವೆಸ್ಟ್ ಇಂಡೀಸ್ ಆಲ್ ರೌಂಡರ್ ತನ್ನತವರು ಟ್ರಿನಿಡಾಡ್ ನ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ. 

ಟ್ರಿಬ್ಯಾಗೊ ನೈಟ್ ರೈಡರ್ಸ್ ಪರ ಆಡುತ್ತಿದ್ದ ಬ್ರಾವೋ, ಸೇಂಟ್ ಲೂಸಿಯಾ ಜೋಕ್ಸ್ ತಂಡದ ರಖೀಮ್ ಕಾರ್ನವಾಲ್ ಅವರ ವಿಕೆಟ್ ಪಡೆಯುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. 

ವಿಶ್ವದ ಅತಿ ಹೆಚ್ಚು ಬೇಡಿಕೆಯಿರುವ ಟಿ 20 ಆಟಗಾರರಲ್ಲಿ ಒಬ್ಬರಾದ ಬ್ರಾವೋ 40 ಟೆಸ್ಟ್ ಪಂದ್ಯಗಳಲ್ಲಿ ಕೊನೆಯದು 2010 ರಲ್ಲಿ ನಡೆದಿದ್ದು ವೆಸ್ಟ್ ಇಂಡೀಸ್ ಪರ 164 ಪಂದ್ಯಗಳಲ್ಲಿ ಅವರ ಏಕದಿನ ವೃತ್ತಿಜೀವದಲ್ಲಿ ಕಡೆಯದಾಗಿ ವೆಸ್ಟ್ ಇಂಡೀಸ್ ಪರ 164 ಪಂದ್ಯಗಳಲ್ಲಿ ಅವರ ಏಕದಿನ ವೃತ್ತಿಜೀವನದಲ್ಲಿ ಕಡೆಯ ಬಾರಿಗೆ  2014 ರಲ್ಲಿ ಅಂಕಣಕ್ಕಿಳಿದಿದ್ದರು. ಆದಾಗ್ಯೂ, ಅವರು 2012 ಮತ್ತು 2016 ರ ಟ್ವೆಂಟಿ -20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು,ಅವರು 20 ಕ್ಕೂ ಹೆಚ್ಚು ತಂಡಗಳಿಂದ ನೇಮಕವಾಗಿದ್ದು ಕಡಿಮೆ ಅವಧಿಯ ಕ್ರಿಕೆಟ್ ನಲ್ಲಿ 300 ಮತ್ತು 400 ವಿಕೆಟ್ ಗಳನ್ನು ಗಳಿಸಿದ ಮೊದಲ ಬೌಲರ್ ಎನಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com