ಮೆಲ್ಬೋರ್ನ್: 2021ರ ಜನವರಿಯಲ್ಲಿ ಪೂರ್ವ ನಿಗದಿಯಾಗಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಗುರುವಾರ ಮುಂದೂಡಿಕೆಯಾಗಿದೆ.
ಭಾರತ ಪುರುಷರ ತಂಡದ ಆಸ್ಟ್ರೇಲಿಯಾ ಪ್ರವಾಸ ಮುಕ್ತಾಯದ ನಂತರ ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿತ್ತು. ಆದರೀಗ ಪ್ರವಾಸದಲ್ಲಿ ಮತ್ತೆ ಮೂರು ಅಂತಾರಾಷ್ಟ್ರೀಯ ಪಂದ್ಯಗಳ ಸೇರ್ಪಡೆಗೆ ಯೋಜನೆ ರೂಪಿಸುತ್ತಿರುವ ಕಾರಣ ಪೂರ್ವ ನಿಗದಿಯ ಸರಣಿಯನ್ನು ಮುಂದಿನ ಅವಧಿಗೆ ಮುಂದೂಡಲಾಗಿದೆ.
ಭಾರತ ಮಹಿಳಾ ತಂಡವನ್ನು ಎದುರಿಸಲು ಆಸ್ಟ್ರೇಲಿಯಾ ಮಹಿಳಾ ತಂಡ ಎದುರು ನೋಡುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹಂಗಾಮಿ ಮುಖ್ಯ ಕಾರ್ಯರನಿರ್ವಹಣಾಧಿಕಾರಿ ನಿಕ್ ಹ್ಯಾಕ್ಲೇ ಹೇಳಿದ್ದಾರೆ. ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ, ಸದ್ಯ ನಾಲ್ಕು ಪಂದ್ಯಗಳ ಸರಣಿಯಲ್ಲಿ ಪಾಲ್ಗೊಂಡಿದೆ.
Advertisement