ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಲೆಗ್ ಬೈ ರದ್ದುಪಡಿಸಬೇಕು- ಮಾರ್ಕ್ ವ್ಹಾ ಸಲಹೆ 

ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಲೆಗ್ ಬೈ ರದ್ದುಪಡಿಸಬೇಕೆಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ ಮನ್ ಮಾರ್ಕ್ ವ್ಹಾ ಸಲಹೆ ನೀಡಿದ್ದಾರೆ. ಕೈ ತಪ್ಪಿದ ಬಾಲ್ ಗಾಗಿ  ಬ್ಯಾಟಿಂಗ್ ಮಾಡುತ್ತಿರುವವರಿಗೆ ರನ್ ನೀಡಕೂಡದು ಎಂದು ಅವರು ಹೇಳಿದ್ದಾರೆ.
ಮಾರ್ಕ್ ವ್ಹಾ
ಮಾರ್ಕ್ ವ್ಹಾ

ಸಿಡ್ನಿ: ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಲೆಗ್ ಬೈ ರದ್ದುಪಡಿಸಬೇಕೆಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ ಮನ್ ಮಾರ್ಕ್ ವ್ಹಾ ಸಲಹೆ ನೀಡಿದ್ದಾರೆ. ಕೈ ತಪ್ಪಿದ ಬಾಲ್ ಗಾಗಿ  ಬ್ಯಾಟಿಂಗ್ ಮಾಡುತ್ತಿರುವವರಿಗೆ ರನ್ ನೀಡಕೂಡದು ಎಂದು ಅವರು ಹೇಳಿದ್ದಾರೆ.

ಎಲ್ಲಾ ಕ್ರಿಕೆಟ್ ನಲ್ಲಿ ನಿಯಮವೊಂದನ್ನು ಬದಲಾವಣೆ ಮಾಡಬೇಕಾಗಿದೆ. ವಿಶೇಷವಾಗಿ ಟಿ-20ಯಲ್ಲಿ ಲೆಗ್ ಬೈ ಇರಲೇಬಾರದು ಎಂದು ಮೆಲ್ಬರ್ನ್ ಸ್ಟಾರ್ಸ್ ಹಾಗೂ ಸಿಡ್ನಿ ಥಂಡರ್ ನಡುವಣ   ಬಿಗ್ ಬಾಗ್ ಲೀಗ್ ಎನ್ ಕೌಂಟರ್  ಪಾಕ್ಸ್ ಕ್ರಿಕೆಟ್ ಗಾಗಿ ವೀಕ್ಷಣೆ ವಿವರಣೆ ನೀಡುವಾಗ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಕೈ ತಪ್ಪಿದ ಚೆಂಡಿಗಾಗಿ ಏಕೆ ರನ್ ನೀಡಬೇಕು, ಎರಡು ರನ್ ಗಳನ್ನು ಕೊಡಲೇಬಾರದು  ಎಂದು ಮಾರ್ಕ್ ವ್ಹಾ ಹೇಳಿದ್ದಾರೆ. ಲೆಗ್ ಬೈ ಇದೊಂದು ಆಟದ ಭಾಗವಷ್ಟೇ ಎಂದು ಮಾಜಿ ಇಂಗ್ಲೆಂಡ್ ನಾಯಕ ಮೈಕೇಲ್ ವಾಘನ್ ಮತ್ತಿತರ ಕೆಲ ವೀಕ್ಷಕ ವಿವರಣೆಗಾರರು ಪ್ರತಿಕ್ರಿಯಿಸಿದ್ದಾರೆ.

ಲೆಗ್ ಬೈ ಆಟದ ಒಂದು ಭಾಗ ಎಂಬುದು  ನನ್ನಗೆ ಗೊತ್ತಿದೆ. ಆದರೆ, ರನ್ ನೀಡುವುದು ಸರಿಯಲ್ಲ,  ಯಾವಾಗಲೂ ಬಾಲ್ ಪ್ಯಾಡ್ ಗೆ ತಾಗುತ್ತಾ?  ಇದನ್ನು ಎಲ್ಲಾ  ಮಾದರಿಯ ಕ್ರಿಕೆಟ್ ನಿಂದ ರದ್ದುಪಡಿಸುವುದು ಉತ್ತಮ ಎಂದು ಮಾರ್ಕ್ ವ್ಹಾ ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ಕ್ರಿಕೆಟ್ ನಲ್ಲಿ ಅನೇಕ ಬದಲಾವಣೆಗಳಾಗಿವೆ. ಟಿ-20 ಬಂದಿದೆ. ಐದು ದಿನಗಳ ಟೆಸ್ಟ್  ಪಂದ್ಯ ನಾಲ್ಕು ದಿನಕ್ಕೆ ಹೋಗಿದೆ. ಆದರೆ, ಇವೆಲ್ಲಾವನ್ನು ಹೆಚ್ಚು ಬಹಿರಂಗಗೊಳಿಸುವುದು ಮಾರ್ಕ್ ವ್ಹಾ ಎಂದು ಅನ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com