47ರ ವಸಂತಕ್ಕೆ ಕಾಲಿಟ್ಟ 'ದಿ ವಾಲ್' ರಾಹುಲ್ ದ್ರಾವಿಡ್-ಕ್ರಿಕೆಟ್ ದಿಗ್ಗಜರಿಂದ ಶುಭ ಹಾರೈಕೆ

ಭಾರತ ಕ್ರಿಕೆಟ್ ನ ಮರೆಯಾಗದ ನಕ್ಷತ್ರ ಹಾಗೂ 'ಭಾರತದ ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಅವರು 47ನೇ ವಸಂತಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರ ಹುಟ್ಟು ಹಬ್ಬದ ದಿನದಂದು ಎಲ್ಲರ ಸ್ಪೂರ್ತಿಯ ನಾಯಕನಾಗಿದ್ದ ದ್ರಾವಿಡ್ ಗೆ ಕ್ರಿಕೆಟ್ ಲೋಕದ ಗಣ್ಯ ಆಟಗಾರರು ಶುಭ ಹಾರೈಸಿದ್ದಾರೆ.
47ರ ವಸಂತಕ್ಕೆ ಕಾಲಿಟ್ಟ 'ದಿ ವಾಲ್' ರಾಹುಲ್ ದ್ರಾವಿಡ್-ಕ್ರಿಕೆಟ್ ದಿಗ್ಗಜರಿಂದ ಶುಭ ಹಾರೈಕೆ
Updated on

ನವದೆಹಲಿ:  ಭಾರತ ಕ್ರಿಕೆಟ್ ನ ಮರೆಯಾಗದ ನಕ್ಷತ್ರ ಹಾಗೂ 'ಭಾರತದ ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಅವರು 47ನೇ ವಸಂತಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರ ಹುಟ್ಟು ಹಬ್ಬದ ದಿನದಂದು ಎಲ್ಲರ ಸ್ಪೂರ್ತಿಯ ನಾಯಕನಾಗಿದ್ದ ದ್ರಾವಿಡ್ ಗೆ ಕ್ರಿಕೆಟ್ ಲೋಕದ ಗಣ್ಯ ಆಟಗಾರರು ಶುಭ ಹಾರೈಸಿದ್ದಾರೆ.

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ರಾಹುಲ್ ದ್ರಾವಿಡ್‌ಗೆ ಜನ್ಮದಿನದ ಶುಭಾಶಯಗಳನ್ನು ಕೋರಿ ಅವರನ್ನು "ಮಾರ್ಗ ತೋರುವ ಬೆಳಕು" ಎಂದು ಕರೆದಿದ್ದಾರೆ./

"ನನ್ನ ಸ್ಫೂರ್ತಿ ... ಯಾವಾಗಲೂ ನಾನು ಅವರತ್ತ ನೋಡುವೆ. ಅವರೊಂದಿಗೆ ನನ್ನ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದ ಪ್ರವೇಶ ಮಾಡಿದ್ದೆ. ಯಾವಾಗಲೂ ನನಗೆ ಅವರು ಮಾರ್ಗ ತೋರುವ ಬೆಳಕುಮತ್ತು ಆದರ್ಶಪ್ರಾಯರಾಗಿದ್ದಾರೆ.ಅವರು ನನಗೆ ಯಾವಾಗಲೂ ಅಮೂಲ್ಯ. ರಾಹುಲ್ ಭಾಯ್ ಅವರಿಗೆ ಜನ್ಮದಿನದ ಶುಭಾಶಯಗಳು , ”ಎಂದು ರಹಾನೆ ಟ್ವೀಟ್ ಮಾಡಿದ್ದಾರೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರು ದ್ರಾವಿಡ್‌ಗೆ ಶುಭ ಹಾರೈಸಿ: "ರಾಹುಲ್ ದ್ರಾವಿಡ್ ಅವರಿಗೆ ಜನ್ಮದಿನದ ಶುಭಾಶಯಗಳು! ಅನೇಕರಿಗೆ ಸ್ಫೂರ್ತಿ ..! ಅದ್ಭುತವಾದ ವರ್ಷ #TheWall #HappyBirthdayRahulDravid". ಎಂದು ಟ್ವೀಟ್ ಮಾಡಿದ್ದಾರೆ.

"ನನ್ನ ತಿಳುವಳಿಕೆಯಿಂದ, ನಾನು ಗ್ರೈಂಡಿಂಗ್ ಅಡುಗೆಮನೆಯಲ್ಲಿ ಮಾತ್ರವೇ ನಡೆಯುತ್ತದೆ ಎಂದು ನಂಬಿದ್ದೆ. ಆದರೆ ದ್ರಾವಿಡ್ ಒಬ್ಬ ಉತ್ತಮ ಆಟಗಾರರಾಗಿ ಕ್ರಿಕೆಟ್ ಪಿಚ್ ನಲ್ಲಿ ಗ್ರೈಂಡಿಂಗ್ ಮಾಡಿಸಬಹುದು ಎಂದು ಕಲಿಸಿದ್ದರು.ನಾವು "ಗೋಡೆ"ಯನ್ನು ಹೊಂದಿದ್ದಾಗ ನಮ್ಮೆಲ್ಲರನ್ನೂ ಹೊಂದಿದ್ದೆವು.#HappyBirthdayRahulDravid," " ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

"ಜನ್ಮದಿನದ ಶುಭಾಶಯಗಳು#RahulDravid what a legend,"  ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

"ಸ್ಫೂರ್ತಿ. ಮಾದರಿ, ಆದರ್ಶ,  ದಂತಕಥೆ. ಮಹಾನ್ ವ್ಯಕ್ತಿ, ರಾಹುಲ್ ದ್ರಾವಿಡ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

300 ಕ್ಕೂ ಹೆಚ್ಚು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಿದ್ದ ಏಕೈಕ ಆಟಗಾರ ದ್ರಾವಿಡ್ ಅವರು ಭಾರತಕ್ಕಾಗಿ 164 ಟೆಸ್ಟ್, 344 ಏಕದಿನ ಮತ್ತು ಒಂದು ಟಿ 20 ಐ ಆಡಿದ್ದಾರೆ. ಅವರು ಮಾರ್ಚ್ 2012 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ದ್ರಾವಿಡ್ ತಮ್ಮ ವೃತ್ತಿಜೀವನವನ್ನು 48 ಅಂತರರಾಷ್ಟ್ರೀಯ ಶತಕಗಳೊಂದಿಗೆ ಮುಗಿಸಿದರು.

ಅವರು ಈಗ ಜೂನಿಯರ್ ಇಂಡಿಯನ್ ತಂಡಗಳಿಗೆ (ಇಂಡಿಯಾ ಅಂಡರ್ -19, ಇಂಡಿಯಾ ಎ) ಕೋಚ್ (ತರಬೇತುದಾರ೦ಪಾತ್ರವನ್ನು ವಹಿಸಿಕೊಂಡಿದ್ದಾರೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರೂ ಆಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com