ರವೀಂದ್ರ ಜಡೇಜಾ ಭಾರತ ಟೆಸ್ಟ್ ಕ್ರಿಕೆಟ್ ನ ಶತಮಾನದ 'ಎಂವಿಪಿ'!

ಆಲ್ ರೌಂಡರ್ ರವೀಂದ್ರ ಜಡೇಜಾ ಭಾರತ ಟೆಸ್ಟ್ ಕ್ರಿಕೆಟ್ ನ ಶತಮಾನದ ಅತ್ಯಮೂಲ್ಯ ಟೆಸ್ಟ್ ಆಟಗಾರ (most valuable Test player) ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
Updated on

ನವದೆಹಲಿ: ಆಲ್ ರೌಂಡರ್ ರವೀಂದ್ರ ಜಡೇಜಾ ಭಾರತ ಟೆಸ್ಟ್ ಕ್ರಿಕೆಟ್ ನ ಶತಮಾನದ ಅತ್ಯಮೂಲ್ಯ ಟೆಸ್ಟ್ ಆಟಗಾರ (most valuable Test player) ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 

ವಿಸ್ಡನ್ ಪತ್ರಿಕೆ ರವೀಂದ್ರ ಜಡೇಜಾ ಅವರನ್ನು ಅತ್ಯಮೂಲ್ಯ ಟೆಸ್ಟ್ ಆಟಗಾರನೆಂದು ಹೇಳಿದ್ದು, 97.3 ಎಂವಿಪಿ ರೇಟಿಂಗ್ ನೀಡಿದೆ. ಈ ಮೂಲಕ 31 ವರ್ಷದ ಜಡೇಜಾ ಕೇವಲ ಭಾರತಕ್ಕೆ ಅಷ್ಟೇ ಅಲ್ಲದೇ ಜಾಗತಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಶ್ರೀಲಂಕಾದ ಲೆಜೆಂಡ್ ಮುತ್ತಯ್ಯ ಮುರಳೀಧರನ್ ನಂತರದ ಅತ್ಯಮೂಲ್ಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.

"ಟೀಂ ಇಂಡಿಯಾಗೆ ಆಡುವುದು ಕನಸಾಗಿತ್ತು. ಇದರ ಹೊರತಾಗಿ, ಅತ್ಯಮೂಲ್ಯ ಆಟಗಾರನೆಂಬ ಕೀರ್ತಿಗೆ ಭಾಜನರಾಗಿರುವುದರಿಂದ ಇನ್ನಷ್ಟು ಧನ್ಯನಾಗಿದ್ದೇನೆ, ನನ್ನ ಅಭಿಮಾನಿಗಳು ತಂಡದ ಸಹಕ್ರೀಡಾಪಟುಗಳು, ಕೋಚ್, ಸಿಬ್ಬಂದಿವರ್ಗದ ಸಹಕಾರ ಹಾಗೂ ಅವರ ತುಂಬು ಹೃದಯದ ಪ್ರೀತಿ ಹಾಗೂ ಬೆಂಬಲಗಳಿಗೆ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ ಜಡೇಜಾ

2012 ರಲ್ಲಿ ಮೊದಲ ಟೆಸ್ಟ್ ಪಂದ್ಯದಿಂದ ಈ ವರೆಗೂ 49 ಟೆಸ್ಟ್ ಪಂದ್ಯಗಳನ್ನಾಡಿರುವ ಜಡೇಜಾ, 1,869 ರನ್ ಕಲೆ ಹಾಕಿದ್ದು, ಒಂದು ಶತಕ, 14 ಅರ್ಧಶತಕಗಳನ್ನು ತಮ್ಮ ಖಾತೆಗೆ ದಾಖಲಿಸಿದ್ದಾರೆ. 213 ವಿಕೆಟ್ ಗಳನ್ನು ಪಡೆದಿದ್ದಾರೆ. ಕ್ರಿಕ್ ವಿಝ್ ನೀಡಿರುವ ವಿಶ್ಲೇಷಣೆಯ ಪ್ರಕಾರ ಎಂವಿಪಿ ರೇಟಿಂಗ್ ನ್ನು ನೀಡಲಾಗುತ್ತದೆ. 

ಟೆಸ್ಟ್ ತಂಡದಲ್ಲಿ ಸ್ವಾಭಾವಿಕ ಆಟಗಾರನಲ್ಲದ ಜಡೇಜಾ ಅವರನ್ನು ಎಂವಿಪಿ ರೇಟಿಂಗ್ ನಲ್ಲಿ ಕಾಣುತ್ತಿರುವುದು ಅಚ್ಚರಿಯ ಸಂಗತಿ. ಆದರೆ ಅವರು ಆಡಿತ ಪಂದ್ಯಗಳಲ್ಲಿ ಬಹುತೇಕ ಮುನ್ನೆಲೆಯ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಹಾಗೂ ನಂ.6 ನೇ ಸ್ಥಾನದಲ್ಲಿ ಆಡಿದ್ದು ತಂಡಕ್ಕೆ ನೆರವಾಗಿದ್ದಾರೆ ಎಂದು ಕ್ರಿಕ್ ವಿಝ್ ನ ಫ್ರೆಡ್ಡಿ ವೈಲ್ಡ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com