ಆ ಒಂದು ಕಾರಣಕ್ಕೆ ಗಂಗೂಲಿ ದ್ವೇಷಿಸಿದ್ದ ನಾಸಿರ್‌ ಹುಸೇನ್

ಟೀಮ್ ಇಂಡಿಯಾ ವಿದೇಶಗಳಲ್ಲೂ ಅಬ್ಬರಿಸಬಲ್ಲದು ಎಂದು ತೋರಿಸಿಕೊಟ್ಟ ನಾಯಕ ಸೌರವ್ ಗಂಗೂಲಿ. ಮೊಹಮ್ಮದ್ ಅಜರುದ್ದೀನ್ ಟೀಮ್ ಇಂಡಿಯಾದಿಂದ ಹೊರಬಿದ್ದ ಬಳಿಕ 2000ದ ಇಸವಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಸೌರವ್ ತಂಡವನ್ನು ಯಶಸ್ಸಿನ ಅಲೆಯಲ್ಲಿ ಮುನ್ನಡೆಸಿ ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಸ್ಥಾನ ಪಡೆದರು.
ಸೌರವ್ ಗಂಗೂಲಿ, ನಾಸೀರ್ ಹುಸೇನ್
ಸೌರವ್ ಗಂಗೂಲಿ, ನಾಸೀರ್ ಹುಸೇನ್
Updated on

ಲಂಡನ್: ಟೀಮ್ ಇಂಡಿಯಾ ವಿದೇಶಗಳಲ್ಲೂ ಅಬ್ಬರಿಸಬಲ್ಲದು ಎಂದು ತೋರಿಸಿಕೊಟ್ಟ ನಾಯಕ ಸೌರವ್ ಗಂಗೂಲಿ.ಮೊಹಮ್ಮದ್ ಅಜರುದ್ದೀನ್ ಟೀಮ್ ಇಂಡಿಯಾದಿಂದ ಹೊರಬಿದ್ದ ಬಳಿಕ 2000ದ ಇಸವಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಸೌರವ್ ತಂಡವನ್ನು ಯಶಸ್ಸಿನ ಅಲೆಯಲ್ಲಿ ಮುನ್ನಡೆಸಿ ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಸ್ಥಾನ ಪಡೆದರು.

ರೋಷಾವೇಶ ಸ್ವಭಾವದ ಕ್ಯಾಪ್ಟನ್ ಆಗಿದ್ದ ಸೌರವ್ 2002ರಲ್ಲಿ ಇಂಗ್ಲೆಂಡ್ ವಿರುದ್ಧದ ನ್ಯಾಟ್ ವೆಸ್ಟ್  ಏಕದಿನ ಕ್ರಿಕೆಟ್ ಸರಣಿಯಲ್ಲಿ ಜಯ ದಾಖಲಿಸಿ ಕ್ರಿಕೆಟ್ ಕಾಶಿ ಲಾರ್ಡ್ಸ್  ಕ್ರೀಡಾಂಗಣದ ಡಗ್ ಔಟ್ ನಲ್ಲಿ  ಶರ್ಟ್ ತೆಗೆದು ಸಂಭ್ರಮಿಸಿದ್ದ ಪರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಈಗಲೂ ಅಚ್ಚಳಿಯದಂತೆ ಉಳಿದಿದೆ.

ಅಷ್ಟೇ ಅಲ್ಲದೆ ಸೌರವ್ ಸಾರಥ್ಯದಲ್ಲಿ ಟೀಮ್ ಇಂಡಿಯಾ 2002ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್  ಟ್ರೋಫಿ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಜಂಟಿಯಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಬಳಿಕ 2003ರ ಐಸಿಸಿ ಏಕದಿನ ಕ್ರಿಕೆಟ್ ,ವಿಶ್ವಕಪ್  ಟೂರ್ನಿಯ ಫೈನಲ್ ತಲುಪಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ರನ್ನರ್ಸ್ ಅಪ್  ಸ್ಥಾನ ಪಡೆದಿತ್ತು.

ಟೆಸ್ಟ್ ಕ್ರಿಕೆಟ್ ನಲ್ಲೂ ವಿದೇಶಗಳಲ್ಲಿ ಸರಣಿ ಗೆಲುವು ದಾಖಲಿಸಲು ಆರಂಭಿದ್ದ ಭಾರತ ತಂಡ, 2004ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆತಿಥೇಯರ ಎದುರು ಕೂದಲೆಳೆ ಅಂತರದಲ್ಲಿ ಸರಣಿ  ಜಯದಿಂದ ವಂಚಿತವಾಗಿ ಸಮಬಲ ಸಾಧಿಸಿತ್ತು.ಟೀಮ್ಇಂಡಿಯಾಗೆ ನಾಯಕನಾಗಿ ಸೌರವ್  ಗಂಗೂಲಿ ಅವರ ಕೊಡುಗೆಯನ್ನು ಎಷ್ಟು ಹೊಗಳಿದರೂ ಸಾಲದು. ಅಂದಹಾಗೆ ಎದುರಾಳಿ ತಂಡದ ನಾಯಕರಿಗೆ ಗಂಗೂಲಿ ಎಂದರೆ ಕಿಂಚಿತ್ತೂ ಇಷ್ಟವಾಗುತ್ತಿರಲಿಲ್ಲ.

 ಇದಕ್ಕೆ ಕಾರಣವೂ ಇದೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್  ವಾ ಈ ಬಗ್ಗೆ ಹೇಳಿಕೊಂಡಿದ್ದರು. ಅದೇನೆಂದರೆ  ಟಾಸ್  ಸಲುವಾಗಿ ಸೌರವ್ ಎದುರಾಳಿ ನಾಯಕರನ್ನು ಹೆಚ್ಚು ಕಾಯುವಂತೆ ಮಾಡುತ್ತಿದ್ದರು.ಇದೀಗ ಇಂಗ್ಲೆಂಡ್ ನ ಮಾಜಿ ನಾಯಕ ನಾಸಿರ್  ಹುಸೇನ್  ಕೂಡ ಇದೊಂದೇ ಕಾರಣಕ್ಕೆ ಗಂಗೂಲಿಯನ್ನು ಬಹಳ ದ್ವೇಶಿಸುತ್ತಿದ್ದುದ್ದಾಗಿ ಹೇಳಿಕೊಂಡಿದ್ದಾರೆ.

ಸೌರವ್  ಆ ರೀತಿಯ ವ್ಯಕ್ತಿ. ನಾನು ಅವರೆದುರು ಆಡುವ ದಿನಗಳಲ್ಲಿ ಅವರನ್ನು ಬಹಳ ದ್ವೇಶಿಸಿದ್ದೆ. ಪ್ರತಿ ಬಾರಿ ಟಾಸ್ ಗೆ ತೆರಳುವಾಗಲೆಲ್ಲಾ ನಮ್ಮನ್ನು ಬಹಳ ಕಾಯುವಂತೆ ಮಾಡುತ್ತಿದ್ದರು. ಆಗ, ಸೌರವ್ ಗಂಟೆ 10.30 ಆಗಿದೆ ನಾವು ಟಾಸ್ ಮಾಡಬೇಕು ಎಂದು ಅವರಿಗೆ ತಿಳಿಸಿಕೊಡಬೇಕಿತ್ತು, ಎಂದು ಸ್ಟಾರ್  ಸ್ಪೋರ್ಟ್ಸ್ ನ ಕ್ರಿಕೆಟ್  ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಹುಸೇನ್ ಹೇಳಿಕೊಂಡಿದ್ದಾರೆ.

ಈಗ ಅವರೊಟ್ಟಿಗೆ ಕಳೆದ ಒಂದು ದಶಕದಲ್ಲಿ ಕ್ರಿಕೆಟ್  ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಬಹಳ ಶಾಂತ ಸ್ವಭಾವದ ಸೌಮ್ಯ ವ್ಯಕ್ತಿ ಅವರು ಆದರೆ ವೀಕ್ಷಕ ವಿವರಣೆಗೂ ಅವರು ತಡವಾಗಿ ಬರುತ್ತಾರೆ. ಆದರೆ ಬಹಳ ಪ್ರಿಯವಾದ ವ್ಯಕ್ತಿ. ಕ್ರಿಕೆಟ್ ವೃತ್ತಿಬದುಕೇ ಹಾಗೆ. ನೀವು ಎದುರಾಳಿಗಳಾಗಿ ಆಡುವ ಸಂದರ್ಭದಲ್ಲಿ ಬಹಳ ದ್ವೇಷ ಮಾಡುತ್ತೀರಿ. ಆದರೆ,ನಿವೃತ್ತಿ ನಂತರ ಅವರನ್ನು ಎದುರಾದಾಗ ಬಹಳ ಪ್ರೀತಿಯಿಂದ ಕಾಣುತ್ತೀರಿ  ಎಂದು ಹುಸೇನ್ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com