ಮೂರನೇ ಟೆಸ್ಟ್: ಬ್ರಾಡ್ ದಾಳಿಗೆ ತತ್ತರಿಸಿದ ವಿಂಡೀಸ್

ಬಲಗೈ ಮಧ್ಯಮ ವೇಗಿ ಸ್ಟುವರ್ಟ್ ಬ್ರಾಡ್ (31ಕ್ಕೆ 6) ಅವರ ಮಾರಕ ದಾಳಿಯ ಬಲದಿಂದ ಇಂಗ್ಲೆಂಡ್ ತಂಡ 3ನೇ ಹಾಗೂ ನಿರ್ಣಾಯಕ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ, ಇನಿಂಗ್ಸ್ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
ಇಂಗ್ಲೆಂಡ್-ವಿಂಡೀಸ್
ಇಂಗ್ಲೆಂಡ್-ವಿಂಡೀಸ್

ಮ್ಯಾಂಚೆಸ್ಟರ್: ಬಲಗೈ ಮಧ್ಯಮ ವೇಗಿ ಸ್ಟುವರ್ಟ್ ಬ್ರಾಡ್ (31ಕ್ಕೆ 6) ಅವರ ಮಾರಕ ದಾಳಿಯ ಬಲದಿಂದ ಇಂಗ್ಲೆಂಡ್ ತಂಡ 3ನೇ ಹಾಗೂ ನಿರ್ಣಾಯಕ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ, ಇನಿಂಗ್ಸ್ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

ಇಲ್ಲಿನ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಭಾನುವಾರ 6 ವಿಕೆಟ್ ಗಳಿಗೆ 137 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಪ್ರವಾಸಿ ಕೆರಿಬಿಯನ್ ಬಳಗ, 65 ಓವರ್ ಗಳಲ್ಲಿ 197 ರನ್ ಗಳಿಗೆ ಸರ್ವಪತನಗೊಂಡಿತು. ಬಳಿಕ 172 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಜೋ ರೂಟ್ ಬಳಗ ಚಹಾ ವಿರಾಮದ ವೇಳೆಗೆ 32 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 86 ರನ್ ಗಳಿಸಿ, ಒಟ್ಟಾರೆ 258 ರನ್ ಗಳ ಮುನ್ನಡೆಯಲ್ಲಿತ್ತು. ರೋರಿ ಬರ್ನ್ಸ್ (ಬ್ಯಾಟಿಂಗ್ 38) ಮತ್ತು ಡಾಮಿನಿಕ್ ಸಿಬ್ಲಿ (ಬ್ಯಾಟಿಂಗ್ 42) ಕ್ರೀಸ್ ನಲ್ಲಿದ್ದರು.

ಇದಕ್ಕೂ ಮುನ್ನ ವಿಂಡೀಸ್ ಪರ ಗರಿಷ್ಠ 46 ರನ್ ಗಳಿಸಿದ ನಾಯಕ ಜೇಸನ್ ಹೋಲ್ಡರ್, ತಮ್ಮ ದೇಶದ ಪರ 2000ಕ್ಕೂ ಅಧಿಕ ರನ್ ಮತ್ತು 100ಕ್ಕೂ ಹೆಚ್ಚು ವಿಕೆಟ್ ಪಡೆದ 3ನೇ ಆಟಗಾರ ಎನಿಸಿದರು. ಗ್ಯಾರಿ ಸೋಬರ್ಸ್ ಮತ್ತು ಕಾರ್ಲ್ ಸೂಪರ್ ಮೊದಲೆರಡು ಸ್ಥಾನದಲ್ಲಿದ್ದಾರೆ. ದ್ವಿತೀಯ ಟೆಸ್ಟ್ ನಲ್ಲಿ ಮಿಂಚಿ ತಂಡದ ಜಯಕ್ಕೆ ಕಾರಣವಾಗಿದ್ದ ಬ್ರಾಡ್, ಸರಣಿಯ ನಿರ್ಣಾಯಕ ಟೆಸ್ಟ್ ನಲ್ಲೂ ತಮ್ಮ ಅಮೋಘ ಲಹರಿ ಮುಂದುವರಿಸಿ, ಪ್ರವಾಸಿ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದರು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ : 369 ಮತ್ತು ದ್ವಿತೀಯ ಇನಿಂಗ್ಸ್ (ಚಹಾ ವಿರಾಮಕ್ಕೆ): 32 ಓವರ್ ಗಳಲ್ಲಿ ವಿಕೆಟ್ ಇಲ್ಲದೆ 86 (ಬರ್ನ್ಸ್ ಬ್ಯಾಟಿಂಗ್ 38, ಸಿಬ್ಲಿ ಬ್ಯಾಟಿಂಗ್ 42).
ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 65 ಓವರ್ ಗಳಲ್ಲಿ 197 (ಜೇಸನ್ 46, ಡೌರಿಚ್ 37, ಕ್ಯಾಂಬೆಲ್ 32; ಬ್ರಾಡ್ 31ಕ್ಕೆ 6).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com