ಪಾಂಟಿಂಗ್ ಅಂಪೈರ್ ರೀತಿಯಲ್ಲಿ ವರ್ತಿಸಿದ್ದರು: 'ಮಂಕಿಗೇಟ್ 'ಪ್ರಕರಣ ನೆನೆದ ಹರ್ಭಜನ್ ಸಿಂಗ್!

ಮಂಕಿಗೇಟ್ ಪ್ರಕರಣದಿಂದ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ  2008ರ ಆಸ್ಟ್ರೇಲಿಯಾ ವಿರುದ್ಧದ  ಟೆಸ್ಟ್ ಪಂದ್ಯದಲ್ಲಿ ರಿಕಿ ಪಾಟಿಂಗ್ ತನ್ನಷ್ಟಕ್ಕೆ ತಾನೇ ಅಂಪೈರ್ ರೀತಿಯಲ್ಲಿ ವರ್ತಿಸುತ್ತಿದ್ದರು ಎಂದು ಸ್ಪೀನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಹರ್ಭಜನ್ ಸಿಂಗ್, ರಿಕಿ ಪಾಂಟಿಂಗ್
ಹರ್ಭಜನ್ ಸಿಂಗ್, ರಿಕಿ ಪಾಂಟಿಂಗ್

ನವದೆಹಲಿ: ಮಂಕಿಗೇಟ್ ಪ್ರಕರಣದಿಂದ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ  2008ರ ಆಸ್ಟ್ರೇಲಿಯಾ ವಿರುದ್ಧದ  ಟೆಸ್ಟ್ ಪಂದ್ಯದಲ್ಲಿ ರಿಕಿ ಪಾಟಿಂಗ್ ತನ್ನಷ್ಟಕ್ಕೆ ತಾನೇ ಅಂಪೈರ್ ರೀತಿಯಲ್ಲಿ ವರ್ತಿಸುತ್ತಿದ್ದರು ಎಂದು ಸ್ಪೀನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

2008ರಲ್ಲಿ ಸಿಡ್ನಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದಲ್ಲಿ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್  ತಮ್ಮನ್ನು ಕೆಟ್ಟ ಪದದಿಂದ ಬೈಯ್ದು, ಜನಾಂಗೀಯ ನಿಂದನೆ ಮಾಡಿದ್ದರು ಎಂದು ಆರೋಪಿಸಿದ್ದರು. ಮೆಂಕಿ ಗೇಟ್ ವಿವಾದದ ಆರೋಪವನ್ನು ಹರ್ಭಜನ್ ಸಿಂಗ್ ನಿರಾಕರಿಸಿದ್ದರು, ಹರ್ಭಜನ್ ಸಿಂಗ್ ಮೇಲೆ ಮೂರು ಪಂದ್ಯಗಳ ನಿಷೇಧ ಹೇರಲಾಗಿತ್ತು.

ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ ಚೋಪ್ರಾ ಜೊತೆಗಿನ ಸಂವಾದದಲ್ಲಿ 2008ರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಕುರಿತು ಮಾತನಾಡಿದ ಹರ್ಭಜನ್ ಸಿಂಗ್, ಆ ಪಂದ್ಯದಲ್ಲಿ ರಿಕಿ ಪಾಂಟಿಂಗ್ ತನ್ನಷ್ಟಕ್ಕೆ ತಾನು ಅಂಪೈರ್ ಎಂದಿಕೊಂಡಿದ್ದರು. ಕ್ಯಾಚ್ ಹಿಡಿದಿರುವುದಾಗಿ ಹೇಳಿಕೊಳ್ಳುತ್ತಿದ್ದ ಪಾಟಿಂಗ್ ನಂತರ ತೀರ್ಪು ನೀಡುತ್ತಿದ್ದರು. ತಮ್ಮ ಹಾಗೂ ಸೈಮಂಡ್ಸ್ ನಡುವಣದ ವಿವಾದ ಮೈದಾನದ ಒಳಗಡೆಯೇ ಇರಬೇಕಿತ್ತು. ಆದರೆ, ಅದು ಮೈದಾನದ ಹೊರಗಡೆ ಚರ್ಚೆಗೆ ಎಡೆಮಾಡಿಕೊಟ್ಟಿತ್ತು ಎಂದು ಹೇಳಿಕೊಂಡಿದ್ದಾರೆ.

ಆ ಪಂದ್ಯದ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸೌರವ್ ಗಂಗೂಲಿ ಕ್ಯಾಚ್ ಹಿಡಿದಿರುವುದಾಗಿ ರಿಕಿ ಪಾಟಿಂಗ್ ಹೇಳಿಕೊಂಡಿದ್ದರು. ಅದು ಕ್ಲೀನ್ ಕ್ಯಾಚಾ ಅಥವಾ ಇಲ್ಲವೇ ಎಂಬುದು ಅಂಪೈರ್ ಗೆ ಗೊತ್ತಿರಲಿಲ್ಲ. ಆದರೆ, ಪಾಟಿಂಗ್  ತನ್ನ ಕೈಗಳನ್ನು ಎತ್ತಿ ಔಟ್ ಸಂದೇಶವನ್ನು ತೋರಿಸಿದರು. ಗಂಗೂಲಿ  ಔಟಾದರು. ವಿಶ್ಲೇಷಕರಾಗಿದ್ದ ಸುನೀಲ್ ಗವಾಸ್ಕರ್ ಕೂಡಾ ಪಾಟಿಂಗ್ ವರ್ತನೆ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ಹರ್ಭಜನ್ ಸಿಂಗ್ ಹೇಳಿದರು. 

ಮೈದಾನದಲ್ಲಿ ನಾನು ಮತ್ತು ಸೈಮಂಡ್ಸ್  ಪರಸ್ಪರ ಹತ್ತಿರದಲ್ಲಿದ್ದೇವು. ಸಚಿನ್ ತೆಂಡೊಲ್ಕರ್ ಬಿಟ್ಟರೆ ಯಾರು ಕೂಡಾ ನಮ್ಮ ಹತ್ತಿರದಲ್ಲಿ ಇರಲಿಲ್ಲ. ಆದರೆ, ವಿಚಾರಣೆ ಪ್ರಾರಂಭವಾದಾಗ ಮ್ಯಾಥ್ಯೂ ಹೆಡೇನ್, ಗಿಲ್ ಕ್ರಿಸ್ಟ್, ಮೈಕೇಲ್ ಕ್ಲಾರ್ಕ್, ಮತ್ತು ರಿಕಿ ಪಾಂಟಿಂಗ್ ಎಲ್ಲರೂ ಸೈಮಂಡ್ಸ್ ನನ್ನು ಭಜ್ಜಿ ಏನೆಂದು ಕರೆದರು ಎಂಬುದು ನಮಗೆ ಕೇಳಿಸಿತು ಎಂದು ಹೇಳಿದರು.ಆಸ್ಟ್ರೇಲಿಯಾ ಮಾಧ್ಯಮಗಳು ಮೈಕಲ್ ಜಾಕ್ಸನ್ ಎಂದು ಕರೆದವು. ಆದರೆ, ಆ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದ ಅನಿಲ್ ಕುಂಬ್ಳೆ ಮತ್ತು ಇಡೀ ಟೀಂ ಇಂಡಿಯಾ ತಮ್ಮನ್ನು ಬೆಂಬಲಿಸಿತು ಎಂದು ಹರ್ಭಜನ್ ಸಿಂಗ್ ಹೇಳಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com