ರಾಬಿನ್ ಸಿಂಗ್
ಕ್ರಿಕೆಟ್
ಲಾಕ್ ಡೌನ್ ನಿಯಮ ಉಲ್ಲಂಘನೆ: ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರು ಪೊಲೀಸರ ವಶಕ್ಕೆ
ಕೋವಿಡ್ -19 ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘನೆಗಾಗಿ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರ್ ನ್ನು ಚೆನ್ನೈ ನಗರ ಪೊಲೀಸರು ಇಂದು ವಶಪಡಿಸಿಕೊಂಡಿದ್ದಾರೆ.
ಚೆನ್ನೈ: ಕೋವಿಡ್ -19 ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘನೆಗಾಗಿ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರ್ ನ್ನು ಚೆನ್ನೈ ನಗರ ಪೊಲೀಸರು ಇಂದು ವಶಪಡಿಸಿಕೊಂಡಿದ್ದಾರೆ.
.ಅಗತ್ಯ ವಸ್ತುಗಳನ್ನು ತರಲು ಮಾನ್ಯತೆ ಪಡೆದ ಇ-ಪಾಸ್ ಹೊಂದದ ಕಾರಣದಿಂದ ರಾಬಿನ್ ಸಿಂಗ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶನಿವಾರ ಬೆಳಿಗ್ಗೆ ಸಿಂಗ್ ಈಸ್ಟ್ ಕೋಸ್ಟ್ ರೋಡ್ (ಇಸಿಆರ್) ನಿಂದ ಬರುತ್ತಿದ್ದ ರಾಬಿನ್ ಸಿಂಗ್ ಅವರ ಕಾರನ್ನು ವಶಕ್ಕೆ ಪಡೆದಿದ್ದು "ಅವರು ತುಂಬಾ ಸಭ್ಯರಾಗಿದ್ದರು ಮತ್ತು ಯಾವುದೇ ಜಗಳವಾಗಿಲ್ಲ. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಅವರ ವಾಹನವನ್ನು ವಶಪಡಿಸಿಕೊಂಡಿದ್ದೇವೆ" ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಪೊಲೀಸ್ ಅಧಿಕಾರಿಯ ಪ್ರಕಾರ, ಸಿಂಗ್ ತನ್ನ ನಿವಾಸದಿಂದ ಎರಡು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿ ತನ್ನ ಕಾರಿನಲ್ಲಿ ಪ್ರಯಾಣಿಸಿದ್ದಾರೆ.
ಜೂನ್ 19 ರಿಂದ ಚೆನ್ನೈ 12 ದಿನಗಳವರೆಗೆ ಸಂಪೂರ್ಣ ಲಾಕ್ ಡೌನ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ