
ಸಿಡ್ನಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ವುಮೆನ್ ಶಫಾಲಿ ವರ್ಮಾ ಅವರನ್ನು ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ಶ್ಲಾಘಿಸಿದ್ದಾರೆ.
ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಹಣಾಹಣಿಗಾಗಿ ಸಜ್ಜಾಗುತ್ತಿದೆ. ಎಲ್ಲ ಪಂದ್ಯಗಳ ಗೆಲುವಿನಲ್ಲಿ ಶಫಾಲಿ ವರ್ಮಾ ಅತ್ಯುತ್ತಮ ಪಾತ್ರವಹಿಸಿದ್ದರು. 16ರ ಪ್ರಾಯದ ಆಟಗಾರ್ತಿ ಟಿ20 ಕ್ರಿಕೆಟ್‌ನಲ್ಲಿ 147.97 ಸ್ಟ್ರೈಕ್ ರೇಟ್‌ನೊಂದಿಗೆ 438 ರನ್ ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 161 ರನ್ ಬಾರಿಸಿದ್ದಾರೆ. ಇದರಲ್ಲಿ ಶ್ರೀಲಂಕಾ ವಿರುದ್ಧ ಗಳಿಸಿದ್ದ 47 ರನ್ ಅವರ ಟೂರ್ನಿಯ ಗರಿಷ್ಠ ಮೊತ್ತವಾಗಿದೆ.
“ಶಫಾಲಿ ವರ್ಮಾ ಅತ್ಯದ್ಭುತ ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮೆನ್ ಆಗಿದ್ದಾರೆ. ಇವರ ಭಯರಹಿತ ಬ್ಯಾಟಿಂಗ್ ಭಾರತಕ್ಕೆ ಆಸರೆಯಾಗಲಿದೆ. ಇವರ ಬ್ಯಾಟಿಂಗ್ ನೋಡಲು ಅದ್ಭುತವಾಗಿರುತ್ತದೆ,’’ ಎಂದು ಬ್ರೆಟ್ ಲೀ ಗುಣಗಾನ ಮಾಡಿದರು.
Advertisement