17 ವರ್ಷದ ಹಿಂದೆ ಶತಕಗಳ ಶತಕ ಸಾಧನೆ ಮಾಡಿದ್ದರು ಸಚಿನ್

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮಾರ್ಚ್ 16 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ, ಶತಕವನ್ನು ಗಳಿಸಿದರು. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
Updated on

ನವದೆಹಲಿ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮಾರ್ಚ್ 16 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ, ಶತಕವನ್ನು ಗಳಿಸಿದರು. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

24 ವರ್ಷಗಳ ಅವರ ಶ್ರೇಷ್ಠ ವೃತ್ತಿಜೀವನದಲ್ಲಿ, 46 ರ ಹರೆಯದ ಸಚಿನ್ 200 ಟೆಸ್ಟ್ ಪಂದ್ಯಗಳಲ್ಲಿ 51 ಶತಕಗಳ ಸಹಾಯದಿಂದ 15921 ರನ್ ಗಳಿಸಿದ್ದಾರೆ. 463 ಏಕದಿನ ಪಂದ್ಯಗಳಲ್ಲಿ 49 ಶತಕಗಳ ಸಹಾಯದಿಂದ 18426 ರನ್ ಗಳಿಸಿದ್ದಾರೆ. ಸಚಿನ್ ಅವರ ಹೆಚ್ಚಿನ ಟೆಸ್ಟ್ ಮತ್ತು ಏಕದಿನ ರನ್ ಮತ್ತು ಶತಕಗಳ ದಾಖಲೆ ಇನ್ನು ಹಸಿರಾಗಿದೆ.

ಮಾರ್ಚ್ 16, 2012 ರಂದು ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಏಕದಿನ ಪಂದ್ಯದಲ್ಲಿ ಸಚಿನ್ 147 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 114 ರನ್ ಗಳಿಸಿದ್ದರು. ಇದು ಅವರ ವೃತ್ತಿಜೀವನದ 100 ನೇ ಅಂತರರಾಷ್ಟ್ರೀಯ ಶತಕ. ಸಚಿನ್ ಅವರ ಇನ್ನಿಂಗ್ಸ್ ಹೊರತಾಗಿಯೂ, ಭಾರತಕ್ಕೆ ಈ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಭಾರತ ಐದು ವಿಕೆಟ್‌ಗಳಿಗೆ 289 ರನ್ ಗಳಿಸಿದ್ದರೆ, ಬಾಂಗ್ಲಾದೇಶ ಐದು ವಿಕೆಟ್‌ಗೆ 293 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.

ಇದು ಮಾಸ್ಟರ್ ಬ್ಲಾಸ್ಟರ್ ಅವರ ಏಕದಿನ ವೃತ್ತಿಜೀವನದ 462 ನೇ ಪಂದ್ಯವಾಗಿತ್ತು. ಅವರ ಕೊನೆಯ ಪಂದ್ಯ ಪಾಕಿಸ್ತಾನ ವಿರುದ್ಧ ಇದೇ ಟೂರ್ನಿಯಲ್ಲಿ 52 ರನ್ ಗಳಿಸಿದ್ದರು. ಸಚಿನ್ ಅವರು ವೆಸ್ಟ್ ಇಂಡೀಸ್ ವಿರುದ್ಧ 2013 ರ ನವೆಂಬರ್‌ನಲ್ಲಿ ಮುಂಬೈನ ತಮ್ಮ ತವರು ಮೈದಾನದಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com