ಕ್ರಿಸ್ ಗೇಯ್ಲ್-ರಾಮ್ ನರೇಶ್ ಸರವಣ್
ಕ್ರಿಸ್ ಗೇಯ್ಲ್-ರಾಮ್ ನರೇಶ್ ಸರವಣ್

ಸರವಣ್ ವಿಷ ಸರ್ಪ: ಗೇಯ್ಲ್ ಆರೋಪಕ್ಕೆ ಮೌನ ಮುರಿದ ರಾಮ್ ನರೇಶ್ ಸರವಣ್

ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮಾಡಿದ್ದ ಆರೋಪಗಳ ಕುರಿತು ಕೊನೆಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಮ್ ನರೇಶ್ ಸರವಣ್ ಮೌನ ಮುರಿದಿದ್ದಾರೆ.
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮಾಡಿದ್ದ ಆರೋಪಗಳ ಕುರಿತು ಕೊನೆಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಮ್ ನರೇಶ್ ಸರವಣ್ ಮೌನ ಮುರಿದಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ ನ ಜಮೈಕಾ ತಲಾವಾಸ್ ತಂಡದಿಂದ ತಮ್ಮನ್ನು ಹೊರದಬ್ಬಲ ಸರವಣ್ ಸಂಚು ರೂಪಿಸಿದ್ದರು ಎಂದು ಗೇಲ್ ಇತ್ತೀಚೆಗಷ್ಟೇ ಆರೋಪಿಸಿದ್ದರು.

ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2020 ಆವೃತ್ತಿಯಲ್ಲಿ ಜಮೈಕಾ ತಲಾವಾಸ್ ತಂಡದ ಪರ ಆಡಲು ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡದೇ ಇರುವುದರಲ್ಲಿ ಮತ್ತು ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ನನ್ನ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಸರವಣ್ ಹೇಳಿದ್ದಾರೆ. 

ಗೇಯ್ಲ್ ಮಾಡಿರುವ ಆರೋಪಗಳೆಲ್ಲಾವು ಸುಳ್ಳು. ಈ ಮೂಲಕ ಒಬ್ಬ ವ್ಯಕ್ತಿಯ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಲಾಗಿದೆ ಎಂದು ಸರವಣ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com