ಗಂಗೂಲಿ ಐಸಿಸಿ ಅಧ್ಯಕ್ಷ: ಸದ್ಯಕ್ಕೆ ಇದಕ್ಕೆ ನಮ್ಮ ಬೆಂಬಲವಿಲ್ಲ ಕ್ರಿಕೆಟ್ ದಕ್ಷಿಣ ಆಫ್ರಿಕಾ

ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿಎಸ್ಎ) ನಿರ್ದೇಶಕ ಗ್ರೇಮ್ ಸ್ಮಿತ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರಭ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ತಿಳಿಸಿದ ಬೆನ್ನಲ್ಲೆ, ಈ ಹುದ್ದೆಗೆ ಅಭ್ಯರ್ಥಿಯನ್ನು ಘೋಷಿಸಿದ ನಂತರವೇ ಮಂಡಳಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ನವದೆಹಲಿ: ಕ್ರಿಕೆಟ್ ದಕ್ಷಿಣ ಆಫ್ರಿಕಾ(ಸಿಎಸ್ಎ) ನಿರ್ದೇಶಕ ಗ್ರೇಮ್ ಸ್ಮಿತ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರಭ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ತಿಳಿಸಿದ ಬೆನ್ನಲ್ಲೆ, ಈ ಹುದ್ದೆಗೆ ಅಭ್ಯರ್ಥಿಯನ್ನು ಘೋಷಿಸಿದ ನಂತರವೇ ಮಂಡಳಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಸಿಎಸ್ಎ ಅಧ್ಯಕ್ಷ ಕ್ರಿಸ್ ನೆಂಜನಿ ಶುಕ್ರವಾರ ಹೇಳಿದ್ದಾರೆ.

ಗಂಗೂಲಿಯಂತಹ ಅನುಭವಿ ಆಟಗಾರ ಈ ಸ್ಥಾನವನ್ನು ವಹಿಸಿಕೊಂಡರೆ ಕ್ರಿಕೆಟ್‌ಗೆ ಲಾಭವಾಗುತ್ತದೆ ಎಂದು ಸ್ಮಿತ್ ಗುರುವಾರ ಹೇಳಿದ್ದರು. ಕ್ರಿಕೆಟ್‌ಗೆ ಉತ್ತಮ ನಾಯಕತ್ವ ಬಹಳ ಮುಖ್ಯ ಮತ್ತು ಆಧುನಿಕ ಆಟ ಮತ್ತು ಮುಂಬರುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಯಾರಾದರೂ ಈ ಸ್ಥಾನದಲ್ಲಿರುವುದು ಬಹಳ ಮುಖ್ಯ. ಐಸಿಸಿ ಅಧ್ಯಕ್ಷರು ದೊಡ್ಡ ಹುದ್ದೆಯಾಗಿದ್ದು, ಗಂಗೂಲಿಯಂತಹ ವ್ಯಕ್ತಿ ಈ ಸ್ಥಾನಕ್ಕೆ ಸೂಕ್ತ ಎಂದಿದ್ದಾರೆ.

ಬಿಸಿಸಿಐನ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಅವರು ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅವಧಿ ಮುಗಿಯುವ ಸಮಯ ಬಂದಿದ್ದು ಈ ಹಿನ್ನೆಲೆಯಲ್ಲಿ ಐಸಿಸಿ ಅಧ್ಯಕ್ಷರಾಗುವ ಅವಕಾಶ ಮತ್ತೆ ಭಾರತಕ್ಕೆ ಸಿಗಲಿದೆಯೇ ಕಾದು ನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com