ದುಬೈ: ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ (ಸಿಎಸ್‌ಕೆ) ತಂಡದ ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಕಳಪೆ ಪ್ರದರ್ಶನ ನೀಡಿ ಹೊರಬಿದ್ದ ಬಿನ್ನಲ್ಲೇ ನಿವೃತ್ತಿ ಹೊಂದಲಿದ್ದಾರೆ. ಈ ಮೂಲಕ ಚೆನ್ನೈ ತಂಡದ ಮೊದಲ ವಿಕೆಟ್ ಪತನಗೊಂಡಿದೆ.
ಐಪಿಎಲ್‌ನ 13ನೇ ಆವೃತ್ತಿಯ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ದ ಜಯ ದಾಖಲಿಸಿದರೂ ಪಂದ್ಯಾವಳಿಯಿಂದ ಹೊರಬಿದ್ದ ನಂತರ ಶೇನ್ ವ್ಯಾಟ್ಸನ್ ವಿದಾಯ ಘೋಷಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಪಂಜಾಬ್ ವಿರುದ್ಧದ ಪಂದ್ಯ ಗೆಲುವಿನ ಬಳಿಕ ಶೇನ್ ವಾಟ್ಸನ್ ಡ್ರೆಸ್ಸಿಂಗ್ ರೂಂನಲ್ಲಿ ಸಹ ಆಟಗಾರರ ಜೊತೆ ನಿವೃತ್ತಿ ಘೋಷಣೆಯ ವಿಚಾರವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಅವರು ಬಹಳ ಭಾವನಾತ್ಮಕವಾಗಿದ್ದರು. ಫ್ರಾಂಚೈಸಿಗಳ ಪರ ಆಡಿದ್ದಕ್ಕೆ ನನಗೆ ಬಹಳ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
Advertisement