"ಯುವ ವಿರಾಟ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ ಈ ಆಟಗಾರ": ಡು ಪ್ಲೆಸಿಸ್ ಯಾರ ಕುರಿತು ಹೇಳಿದ್ದು ಗೊತ್ತೇ?

ವಿಭಿನ್ನ ಶಾಟ್‌ಗಳನ್ನು ನೋಡುವಾಗ ಋತುರಾಜ್ ಗಾಯಕ್ವಾಡ್ ಅವರು ಯುವ ವಿರಾಟ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. 
'ಯುವ ವಿರಾಟ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ ಈ ಆಟಗಾರ'ಎಂದು ಡು ಪ್ಲೆಸಿಸ್ ಹೇಳಿದ್ದು ಯಾರಿಗೆ ಗೊತ್ತೇ?
'ಯುವ ವಿರಾಟ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ ಈ ಆಟಗಾರ'ಎಂದು ಡು ಪ್ಲೆಸಿಸ್ ಹೇಳಿದ್ದು ಯಾರಿಗೆ ಗೊತ್ತೇ?

ಅಬುಧಾಬಿ: ವಿಭಿನ್ನ ಶಾಟ್‌ಗಳನ್ನು ನೋಡುವಾಗ ಋತುರಾಜ್ ಗಾಯಕ್ವಾಡ್ ಅವರು ಯುವ ವಿರಾಟ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. 

ಕಿಂಗ್ಸ್ 11 ಪಂಜಾಬ್ ವಿರುದ್ಧ ಚೆನ್ನೈ 9 ವಿಕೆಟ್ ಗೆಲುವಾಚರಿಸಿದ ಬಳಿಕ ಡು ಪ್ಲೆಸಿಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾನುವಾರ (ನವೆಂಬರ್ 1) ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 53ನೇ ಪಂದ್ಯದಲ್ಲಿ ಕಿಂಗ್ಸ್ 11 ಪಂಜಾಬ್ ವಿರುದ್ಧ 49 ಎಸೆತಗಳಲ್ಲಿ 62 ರನ್‌ ಬಾರಿಸಿದ್ದರು. 

ಫಾಫ್ ಡು ಪ್ಲೆಸಿಸ್ 48, ಅಂಬಾಟಿ ರಾಯುಡು 30 ರನ್ ಸೇರ್ಪಡೆಯೊಂದಿಗೆ ಸಿಎಸ್‌ಕೆ ತಂಡ, ಎದುರಾಳಿ ನೀಡಿದ್ದ 154 ರನ್ ಗುರಿ ತಲುಪಿತ್ತು. 'ಈ ಸೀಸನ್‌ ನಮ್ಮ ಪಾಲಿಗೆ ನಿರಾಶಾದಾಯಕ. ಆದರೆ ಕನಿಷ್ಠ ಮೂರು ಗೆಲುವುಗಳೊಂದಿಗಾದರೂ ನಾವು ಸೀಸನ್ ಮುಗಿಸಿದ್ದೇವೆ. 

ಋತುರಾಜ್ ಗಾಯಕ್ವಾಡ್ ಯುವ ವಿರಾಟ್ ಕೊಹ್ಲಿಯಂತೆ ಕಾಣಿಸಿದರು ಅಲ್ಲವೆ? ಗಾಯಕ್ವಾಡ್ ಅವರಲ್ಲಿ ನನಗೆ ಎದ್ದು ಕಾಣುವ ಸಂಗತಿಯೆಂದರೆ ಆತ ಒತ್ತಡ ನಿಭಾಯಿಸಿ ನಿಲ್ಲುತ್ತಾನೆ,' ಎಂದು ಪಂದ್ಯದ ಬಳಿಕ ಮಾತನಾಡಿದ ಡು ಪ್ಲೆಸಿಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com