ಸಂಗ್ರಹ ಚಿತ್ರ
ಕ್ರಿಕೆಟ್
ಮಹಿಳಾ ಟಿ20 ಚಾಲೆಂಜ್: ಟ್ರೇಲ್‌ಬ್ಲೇಜರ್-ಸೂಪರ್ ನೋವಾಸ್ ಫೈನಲ್ ಫೈಟ್
ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಸೂಪರ್ ನೋವಾಸ್ ಹಾಗೂ ಟ್ರೇಲ್‌ಬ್ಲೇಜರ್ ನಡುವಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಜಯ ಸಾಧಿಸಿತು. ಈ ಮೂಲಕ ಎರಡೂ ತಂಡಗಳು ಮಹಿಳಾ ಟಿ-20 ಚಾಲೆಂಜ್ ಫೈನಲ್ ಗೆ ಅರ್ಹತೆ ಪಡೆದಿದೆ.
ಶಾರ್ಜಾ: ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಸೂಪರ್ ನೋವಾಸ್ ಹಾಗೂ ಟ್ರೇಲ್‌ಬ್ಲೇಜರ್ ನಡುವಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಜಯ ಸಾಧಿಸಿತು. ಈ ಮೂಲಕ ಎರಡೂ ತಂಡಗಳು ಮಹಿಳಾ ಟಿ-20 ಚಾಲೆಂಜ್ ಫೈನಲ್ ಗೆ ಅರ್ಹತೆ ಪಡೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೂಪರ್ ನೋವಾಸ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 146 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟ್ರೇಲ್‌ಬ್ಲೇಜರ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 144 ರನ್ ಸೇರಿಸಿ ಸೋಲು ಕಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸೂಪರ್ ನೋವಾಸ್ ಪರ ಪುನಿಯಾ 30, ಜಯಂಗನಿ 67, ಹರ್ಮನ್ ಪ್ರೀತ್ ಕೌರ್ 31 ರನ್ ಪೇರಿಸಿದ್ದರು.
ಟ್ರೇಲ್‌ಬ್ಲೇಜರ್ ಪರ ಡೊಟಿನ್ 27, ಸ್ಮೃತಿ ಮಂದಾನಾ 33, ದೀಪ್ತಿ ಶರ್ಮಾ ಅಜೇಯ 43 ರನ್ ಬಾರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ