ಐಪಿಲ್ 2020: ದೇವದತ್ ಪಡಿಕ್ಕಲ್- ರಾಹುಲ್ ತೆವಾಟಿಯಾ ಆಟಕ್ಕೆ ಮನಸೋತ ಬ್ರೆಟ್ ಲೀ

ಇತ್ತೀಚೆಗೆ ಮುಕ್ತಾಯವಾದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಸೇರಿದಂತೆ ಇಬ್ಬರು ದೇಶಿ ಆಟಗಾರರು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ಗಮನ ಸೆಳೆದಿದ್ದಾರೆ. ಈ ಬಗ್ಗೆ ಮಾಜಿ ಸ್ಟಾರ್‌ ವೇಗಿಯೇ ಬಹಿರಂಗಪಡಿಸಿದ್ದಾರೆ.
ದೇವದತ್ ಪಡಿಕ್ಕಲ್, ರಾಹುಲ್ ತೆವಾಟಿಯಾ
ದೇವದತ್ ಪಡಿಕ್ಕಲ್, ರಾಹುಲ್ ತೆವಾಟಿಯಾ

ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಸೇರಿದಂತೆ ಇಬ್ಬರು ದೇಶಿ ಆಟಗಾರರು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ಗಮನ ಸೆಳೆದಿದ್ದಾರೆ. ಈ ಬಗ್ಗೆ ಮಾಜಿ ಸ್ಟಾರ್‌ ವೇಗಿಯೇ ಬಹಿರಂಗಪಡಿಸಿದ್ದಾರೆ.

2020ರ ಐಪಿಎಲ್‌ ಟೂರ್ನಿಯಲ್ಲಿ ಹಲವು ಗಮನಾರ್ಹ ಪ್ರದರ್ಶನಗಳು ಮೂಡಿಬಂದಿವೆ. ಕೆ.ಎಲ್‌ ರಾಹುಲ್, ಜಸ್ಪ್ರಿತ್‌ ಬುಮ್ರಾ, ಕಗಿಸೊ ರಬಾಡ, ಶಿಖರ್‌ ಧವನ್‌, ಬೆನ್ ಸ್ಟೋಕ್ಸ್ ಹಾಗೂ ಪ್ಯಾಟ್‌ ಕಮಿನ್ಸ್ ಅವರಂಥ ಹಲವು ಅಂತಾರಾಷ್ಟ್ರೀಯ ಆಟಗಾರರಿಂದ ಅದ್ಭುತ ಪ್ರದರ್ಶನ ಹೊರಬಂದಿದೆ. ಇದರ ಜತೆ ಕೆಲ ದೇಶಿ ಆಟಗಾರರು ಕೂಡ ಮಿಂಚಿನ ಪ್ರದರ್ಶನವನ್ನು ತೋರಿದ್ದಾರೆ. 

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾದಾಗಿನಿಂದಲೂ ಹಲವಾರು ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯ ಮಾಡಿದೆ. 2020ರ ಆವೃತ್ತಿಯಲ್ಲಿಯೂ ಹಲವು ಪ್ರತಿಭೆಗಳು ಹೊರಗೆ ಬಂದಿದ್ದಾರೆ. ಅದರಲ್ಲಿಯೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ರಾಹುಲ್‌ ತೆವಾಟಿಯಾ ಬ್ರೆಟ್‌ ಲೀಗ್‌ ಮನಸನ್ನು ಗೆದ್ದಿದ್ದಾರೆ. 

ಸ್ಟಾರ್‌ ಸ್ಪೋರ್ಟ್ಸ್‌ ಜತೆ ಮಾತನಾಡಿದ ಬ್ರೆಟ್‌ ಲೀ,ಈ ಋತುವಿನ ಉತ್ತಮ ಭಾಗವೆಂದರೆ ಯುವ ಭಾರತೀಯ ಆಟಗಾರರು. ದೇವದತ್‌ ಪಡಿಕ್ಕಲ್‌ ಹಾಗೂ ರಾಹುಲ್‌ ತೆವಾಟಿಯಾ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅತ್ಯುತ್ತಮ ಕ್ರಿಕೆಟ್‌ ಆಡಿರುವುದನ್ನು ನೋಡಿದ್ದೇನೆ. ಆದರೆ ಅತ್ಯುತ್ತಮ ವೇಗದ ಬೌಲರ್‌ಗಳು ಕಾಣಿಸಿಕೊಂಡಿದ್ದಾರೆ," ಎಂದು ಹೇಳಿದರು.

2020ರ ಐಪಿಎಲ್ ನಲ್ಲಿ ‌ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ದೇವದತ್‌ ಪಡಿಕ್ಕಲ್‌ ಆರ್‌ಸಿಬಿ ಪರ  15 ಪಂದ್ಯಗಳಿಂದ 31.53ರ ಸರಾಸರಿಯಲ್ಲಿ ಐದು ಅರ್ಧಶತಕಗಳೊಂದಿಗೆ 473 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಬೆಂಗಳೂರು ಯುವ ಪ್ರತಿಭೆ ವಿಶ್ವ ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com