ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಕನಿಷ್ಠ 15 ವರ್ಷ ವಯಸ್ಸಾಗಿರಬೇಕು: ಐಸಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ವಯಸ್ಸಿನ ನೀತಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜಾರಿಗೆ ತಂದಿದೆ. ಈ ನಿಯಮದ ಅನ್ವಯ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಆಡಬೇಕಾದರೆ ಆಟಗಾರನಿಗೆ ಕಡ್ಡಾಯವಾಗಿ 15 ವರ್ಷ ವಯಸ್ಸಾಗಿರಬೇಕು. 
ಐಸಿಸಿ
ಐಸಿಸಿ
Updated on

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ವಯಸ್ಸಿನ ನೀತಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜಾರಿಗೆ ತಂದಿದೆ. ಈ ನಿಯಮದ ಅನ್ವಯ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಆಡಬೇಕಾದರೆ ಆಟಗಾರನಿಗೆ ಕಡ್ಡಾಯವಾಗಿ 15 ವರ್ಷ ವಯಸ್ಸಾಗಿರಬೇಕು. 

ಐಸಿಸಿ ಈ ನಿಯಮವನ್ನು ಜಾರಿಗೊಳಿಸಿದ ಹೊರತಾಗಿಯೂ ದೇಶಗಳು ಇನ್ನೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆಯನ್ನು ಹೊಂದಿವೆ ಹಾಗೂ ಅಸಾಧಾರಣ ಸನ್ನಿವೇಶಗಳಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನಿಗೆ ಆಯಾ ದೇಶಕ್ಕಾಗಿ ಆಡಲು ಅವಕಾಶ ನೀಡಲು ಮಂಡಳಿಗಳು ಐಸಿಸಿಗೆ ಅರ್ಜಿ ಸಲ್ಲಿಸಬಹುದು.

ಐಸಿಸಿ ಸ್ಪರ್ಧೆಗಳು, ದ್ವಿಪಕ್ಷೀಯ ಸರಣಿ ಮತ್ತು 19 ವಯೋಮಿತಿ ಸೇರಿದಂತೆ ಎಲ್ಲಾ ಕ್ರಿಕೆಟ್‌ನಲ್ಲಿ ಅನ್ವಯವಾಗುವಂತೆ ಆಟಗಾರರ ಸುರಕ್ಷತೆಯನ್ನು ಸುಧಾರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಕನಿಷ್ಠ ವಯಸ್ಸಿನ ನಿರ್ಬಂಧಗಳನ್ನು ಪರಿಚಯಿಸಿರುವುದನ್ನು ದೃಢಪಡಿಸಿದೆ. 

ಪುರುಷ ಅಥವಾ ಮಹಿಳೆಯರ ಕ್ರಿಕೆಟ್‌ನಲ್ಲಿ 19 ವಯೋಮಿತಿ ಹಾಗೂ ಯಾವುದೇ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು 15 ವರ್ಷ ವಯಸ್ಸನ್ನು ನಿಗದಿಪಡಿಸಲಾಗಿದೆ ಎಂದು ಐಸಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com