ಐಸಿಸಿ ದಶಕದ ಏಕದಿನ ಆಟಗಾರ ಪ್ರಶಸ್ತಿ ಸ್ಪರ್ಧೆಯಲ್ಲಿ ಮೂವರು ಭಾರತೀಯರು

ಐಸಿಸಿ ದಶಕದ ಆಟಗಾರ ಪ್ರಶಸ್ತಿಗೆ ಆಟಗಾರರನ್ನು ನಾಮನಿರ್ದೇಶನಗೊಳಿಸಲಾಗಿದೆ.ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಪೀನರ್ ಆರ್ ಅಶ್ವಿನ್  ಈ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಐಸಿಸಿ ದಶಕದ ಆಟಗಾರ ಪ್ರಶಸ್ತಿಗೆ ಆಟಗಾರರನ್ನು ನಾಮನಿರ್ದೇಶನಗೊಳಿಸಿದೆ. ಪ್ರತಿ ಮಾದರಿಯ ಕ್ರಿಕೆಟ್‌ನಲ್ಲೂ ತಲಾ ಏಳು ಆಟಗಾರರನ್ನು ಐಸಿಸಿ ನಾಮನಿರ್ದೇಶನ ಮಾಡಿದೆ. ಏಕದಿನ ಕ್ರಿಕೆಟ್‌ನಲ್ಲೂ ಏಳು ಆಟಗಾರರನ್ನು ಈ ಸ್ಥಾನಕ್ಕೆ ಐಸಿಸಿ ಹೆಸರಿಸಿದ್ದು ಇದರಲ್ಲಿ ಕ್ರಿಕೆಟ್ ಅಭಿಮಾನಿಗಳು ಆಯ್ಕೆ ಮಾಡಬಹುದಾಗಿದೆ.

ಏಕದಿನ ಕ್ರಿಕೆಟ್‌ನಲ್ಲಿ ದಶಕದ ಆಟಗಾರ ಸ್ಥಾನಕ್ಕೆ ಐಸಿಸಿ ಹೆಸರಿಸಿರುವ 7 ಮಂದಿ ಆಟಗಾರರಲ್ಲಿ ಮೂವರು ಭಾರತೀಯ ಆಟಗಾರರು ಎಂಬುದು ವಿಶೇಷತೆಯಾಗಿದೆ. ಭಾರತ ಹೊರತು ಪಡಿಸಿ ಶ್ರೀಲಂಕಾದ ಇಬ್ಬರು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಓರ್ವ ಆಟಗಾರರು ಈ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ,  ಉಪನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್‌ನಲ್ಲಿ ದಶಕದ ಆಟಗಾರನ ಪ್ರಶಸ್ತಿಗೆ ಹೆಸರಿಸಲ್ಪಟ್ಟ ಆಟಗಾರರಾಗಿದ್ದಾರೆ. ಉಳಿದಂತೆ ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ಲಸಿತ್ ಮಲಿಂಗ ಹಾಗೂ ಕುಮಾರ ಸಂಗಾಕ್ಕರ, ಆಸ್ಟ್ರೇಲಿಯಾದ ವೇಗಿ ಮಿಷೆಲ್ ಸ್ಟಾರ್ಕ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಈ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದಾರೆ.

ಐಸಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ನಮ್ಮ ನೆಚ್ಚಿನ ಆಟಗಾರರಿಗೆ ಅಭಿಮಾನಿಗಳು ಮತ ಚಲಾಯಿಸಬಹುದಾಗಿದೆ. ಏಕದಿನ, ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಪ್ರತ್ಯೇಕವಾಗಿ ಈ ದಶಕದ ಆಟಗಾರನನ್ನು ಮತ ಚಲಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಡಿಸೆಂಬರ್ ತಿಂಗಳ 18ರಂದು ಇದರ ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com