ಕ್ರಿಕೆಟ್ ಸ್ಟೇಡಿಯಂ ನಲ್ಲಿ ಭಾರತ-ಆಸ್ಟ್ರೇಲಿಯಾ ಪ್ರೇಮ ನಿವೇದನೆ; ವೈರಲ್ ಆಯ್ತು ವಿಡಿಯೋ
ಕ್ರಿಕೆಟ್
ಕ್ರಿಕೆಟ್ ಸ್ಟೇಡಿಯಂ ನಲ್ಲಿ ಭಾರತ-ಆಸ್ಟ್ರೇಲಿಯಾ ಪ್ರೇಮ ನಿವೇದನೆ; ವೈರಲ್ ಆಯ್ತು ವಿಡಿಯೋ
ಭಾರತ ನ.29 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎರಡನೇ ಸೋಲನ್ನು ಅನುಭವಿಸಿತ್ತು. ಆದರೆ ಪ್ರೀತಿಯಲ್ಲಿ ಗೆದ್ದಿತಾ? ಹೀಗೊಂದು ಪ್ರಶ್ನೆ ನೆನ್ನೆ ಮ್ಯಾಚ್ ನೋಡಿದವರಲ್ಲಿ ಮೂಡಿತ್ತು.
ಭಾರತ ನ.29 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎರಡನೇ ಸೋಲನ್ನು ಅನುಭವಿಸಿತ್ತು. ಆದರೆ ಪ್ರೀತಿಯಲ್ಲಿ ಗೆದ್ದಿತಾ? ಹೀಗೊಂದು ಪ್ರಶ್ನೆ ನೆನ್ನೆ ಮ್ಯಾಚ್ ನೋಡಿದವರಲ್ಲಿ ಮೂಡಿತ್ತು.
ಪಂದ್ಯ ವೀಕ್ಷಣೆಗೆಂದು ಆಗಮಿಸಿದ್ದವರ ಪೈಕಿ ಭಾರತೀಯ ಮೂಲದ ಯುವಕನೋರ್ವ ಆಸ್ಟ್ರೇಲಿಯಾ ಯುವತಿಗೆ ಪ್ರೇಮ ನಿವೇದನೆ ಮಾಡಿದ ವಿಡಿಯೋ ವೈರಲ್ ಆಗತೊಡಗಿದೆ.
ಭಾರತದ ಯುವಕ ತನ್ನ ಪ್ರೇಮಿಗೆ ರಿಂಗ್ ಉಡುಗೊರೆ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿದ್ದು, ಯುವತಿ ಕೂಡ ಪ್ರೇಮವನ್ನು ಒಪ್ಪಿಕೊಂಡಿದ್ದು ವೀಕ್ಷಕರು ಸಂಭ್ರಮಾಚರಣೆಯಲ್ಲಿ ತೊಡಗಿದರು.
ಈ ಪ್ರೇಮ ನಿವೇದನೆಯನ್ನು ಆಸೀಸ್ ಸ್ಟಾರ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ಗಮನಿಸಿ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ