ಅಡಿಲೇಡ್ ಅಥವಾ ಬ್ರಿಸ್ಬೇನ್ ನಲ್ಲಿ ಭಾರತ-ಆಸ್ಟ್ರೇಲಿಯಾ ಸರಣಿ ಆರಂಭ ಸಾಧ್ಯತೆ

ಬಹು ನಿರೀಕ್ಷಿತ ಭಾರತ - ಆಸ್ಟ್ರೇಲಿಯಾದ ಟೆಸ್ಟ್  ಸರಣಿ ಪರ್ಥ್ ಬದಲಿಗೆ ಅಡಿಲೇಡ್ ಅಥವಾ ಬ್ರಿಸ್ಬೇನ್ ನಲ್ಲಿ ಆರಂಭವಾಗುವ ಸಾಧ್ಯತೆಯಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
Updated on

ಮೆಲ್ಬೂರ್ನ್: ಬಹು ನಿರೀಕ್ಷಿತ ಭಾರತ - ಆಸ್ಟ್ರೇಲಿಯಾದ ಟೆಸ್ಟ್  ಸರಣಿ ಪರ್ಥ್ ಬದಲಿಗೆ ಅಡಿಲೇಡ್ ಅಥವಾ ಬ್ರಿಸ್ಬೇನ್ ನಲ್ಲಿ ಆರಂಭವಾಗುವ ಸಾಧ್ಯತೆಯಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ತನ್ನ ಪ್ರದೇಶ ವ್ಯಾಪ್ತಿಯಲ್ಲಿ ಕ್ವಾರಂಟೈನ್ ನಿಯಮಗಳನ್ನು ಸಡಿಲಗೊಳಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಆಸ್ಟ್ರೇಲಿಯಾದ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದ ನಂತರ ಈ ಬದಲಾವಣೆ ಮಾಡಲಾಗುತ್ತಿದೆ.

ವಿಕ್ಟೋರಿಯಾ ರಾಜ್ಯದಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂದು ವೇಳೆ ಎಂಜಿಸಿ ಕ್ರೀಡಾಂಗಣ ದೊರೆಯದಿದ್ದ ಪಕ್ಷದಲ್ಲಿ ಈ ವರ್ಷದ ನಂತರ  ಹಗಲು ರಾತ್ರಿ ಪಂದ್ಯ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಟೆಸ್ಟ್ ಪಂದ್ಯಕ್ಕಾಗಿ ಅಡಿಲೇಡ್ ಒವೆಲ್ ಸಜ್ಜುಗೊಂಡಿದೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.

ಐಪಿಎಲ್ ಮುಗಿದ ಬಳಿಕ ಯುಎಇನಿಂದ ನೇರವಾಗಿ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರು ಬರಲಿದ್ದಾರೆ. ಐಪಿಎಲ್ ಮುಗಿದ ಬಳಿಕ ಆಟಗಾರರು ಹೆಚ್ಚಿನ ಕೋವಿಡ್-19 ಪ್ರಕರಣ ಇರುವ ದೇಶದಿಂದ ನೇರವಾಗಿ ಬರುವುದನ್ನು ಸ್ವೀಕರಿಸಲು ಆಗದು, ಪಂದ್ಯವಾಡಲು ಮತ್ತೊಂದು ರಾಜ್ಯದಿಂದ ಬರುವ ಮುನ್ನ ಕ್ವಾರಂಟೈನ್ ಹೊರಗಡೆ ಸಾಮಾನ್ಯ ತರಬೇತಿ ಪಡೆಯಬೇಕು ಎಂದು ಪಶ್ಚಿಮ ಆಸ್ಟ್ರೇಲಿಯಾ ರಾಜ್ಯ ಸರ್ಕಾರದ ಪ್ರಮುಖ ಮಾರ್ಕ್ ಮ್ಯಾಕ್ ಗೋವಾನ್ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕ್ರಿಕೆಟ್ ಆಸ್ಟ್ರೇಲಿಯಾ ಯೋಜನೆ ಪ್ರಕಾರ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ  ಮತ್ತು ಭಾರತ ತಂಡ ಪರ್ಥ್ ಮೂಲಕ ದೇಶ ಪ್ರವೇಶಿಸುವ ಸಾಧ್ಯತೆಯಿದೆ. ಪರ್ಥ್ ನಲ್ಲಿ ಸಾಧ್ಯವಾಗದಿದ್ದಲ್ಲಿ ಕ್ವಾರಂಟೈನ್ ಅವಧಿಯಲ್ಲಿ ತರಬೇತಿ ಪಡೆದುಕೊಳ್ಳಲು
ತನ್ನ ತಂಡಕ್ಕೆ ಅವಕಾಶ ನೀಡುವಂತೆ ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾ ಬಳಿ ಮನವಿ ಮಾಡಿಕೊಂಡಿದೆ.ಪರಿಷ್ಕೃತ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಈ ವಾರದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com