ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ನಿಷೇಧ ಶಿಕ್ಷೆ ಅವಧಿ ಮುಕ್ತಾಯ

ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ ಭಾರತ ತಂಡದ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರ ಏಳು ವರ್ಷಗಳ ನಿಷೇಧ ಶಿಕ್ಷೆ ಅವಧಿ ಭಾನುವಾರ ಕೊನೆಗೊಂಡಿದೆ.
ಎಸ್. ಶ್ರೀಶಾಂತ್
ಎಸ್. ಶ್ರೀಶಾಂತ್

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ ಭಾರತ ತಂಡದ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರ ಏಳು ವರ್ಷಗಳ ನಿಷೇಧ ಶಿಕ್ಷೆ ಅವಧಿ ಭಾನುವಾರ ಕೊನೆಗೊಂಡಿದೆ.

ನಿಷೇಧ ಅವಧಿ ಮುಕ್ತಾಯಗೊಂಡ ನಂತರ ದೇಶಿಯ ಮಟ್ಟದಲ್ಲಿ ಮತ್ತೆ ವೃತ್ತಿ ಜೀವನ ಆರಂಭಿಸುವುದಾಗಿ 37 ವರ್ಷದ ಶ್ರೀಶಾಂತ್ ಈಗಾಗಲೇ ಸ್ಪಷ್ಪಪಡಿಸಿದ್ದಾರೆ. ಫಿಟ್ನೇಸ್ ಸಾಬೀತುಪಡಿಸಿದರೆ ಶ್ರೀಶಾಂತ್ ಅವರನ್ನು ಪರಿಗಣಿಸುವುದಾಗಿ ಅವರ ತವರು ರಾಜ್ಯ ಕೇರಳ ಭರವಸೆ ವ್ಯಕ್ತಪಡಿಸಿದೆ.

ಎಲ್ಲಾ ಆರೋಪಗಳಿಂದ ಇದೀಗ ಮುಕ್ತವಾಗುತ್ತಿದ್ದು,  ಹೆಚ್ಚಾಗಿ ಪ್ರೀತಿಸುವ ಕ್ರೀಡೆಯನ್ನು ಪ್ರತಿನಿಧಿಸುತ್ತೇನೆ ಎಂದು ಶುಕ್ರವಾರವೇ ಶ್ರೀಶಾಂತ್ ಟ್ವೀಟ್ ಮಾಡಿದ್ದರು. ನಾನು ಆಡುವ ಯಾವುದೇ ತಂಡಕ್ಕೆ ನಾನು ಅತ್ಯುತ್ತಮವಾದದನ್ನು ನೀಡುತ್ತೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ.

ಆದಾಗ್ಯೂ, ಕೋವಿಡ್-19 ಕಾರಣ ಪ್ರಸ್ತುತ ದೇಶಿಯ ಟೂರ್ನಿಗಳು ಮುಂದೂಡಲ್ಪಟ್ಟಿವೆ. ಒಂದು ವೇಳೆ  ಕೇರಳ ಸರ್ಕಾರ ಅವಕಾಶ ನೀಡಿದರೆ,  ಶ್ರೀಶಾಂತ್ ಮತ್ತೆ ಕಮ್ ಬ್ಯಾಂಕ್ ಆಗಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ದೇಶಿಯ ಋತುವಿನ ಟೂರ್ನಿಗಳು ಆರಂಭವಾಗಬೇಕಿತ್ತು. ಆದರೆ, ಕೋವಿಡ್-19 ಕಾರಣ ಮುಂದೂಡಲ್ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com