ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡಿದ ಖ್ಯಾತ ಟೀಂ ಇಂಡಿಯಾ ಆಟಗಾರನಿಗೆ 500 ರು. ದಂಡ!

ಕೊರೊನಾ ವೈರಸ್‌ ಇಂದು ವಿಶ್ವದಾದ್ಯಂತ ಹಬ್ಬಿದ್ದು ಸೋಂಕು ಹೆಚ್ಚು ಹರಡದಂತೆ ತಡೆಯುವ ಉದ್ದೇಶದಿಂದ ಇಂದು ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್‌ಡೌನ್‌ ಮೊರೆ ಹೋಗಿವೆ. ಭಾರತದಲ್ಲೂ ಏಪ್ರಿಲ್‌ 14ರವರೆಗೆ 21 ದಿನಗಳ ಲಾಕ್‌ಡೌನ್‌ ಜಾರಿಯಲ್ಲಿದೆ. ಇನ್ನು ಈ ಲಾಕ್‌ಡೌನ್‌ ಅವಧಿಯನ್ನು ಮುಂದಿನ 2 ತಿಂಗಳವರೆಗೆ ವಿಸ್ತರಿಸುವ ಕುರಿತಾಗಿಯೂ ಚಿಂತನೆ ನಡೆದಿದೆ. 
ರಿಷಿ ಧವನ್
ರಿಷಿ ಧವನ್

ಶಿಮ್ಲಾ: ಕೊರೊನಾ ವೈರಸ್‌ ಇಂದು ವಿಶ್ವದಾದ್ಯಂತ ಹಬ್ಬಿದ್ದು ಸೋಂಕು ಹೆಚ್ಚು ಹರಡದಂತೆ ತಡೆಯುವ ಉದ್ದೇಶದಿಂದ ಇಂದು ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್‌ಡೌನ್‌ ಮೊರೆ ಹೋಗಿವೆ. ಭಾರತದಲ್ಲೂ ಏಪ್ರಿಲ್‌ 14ರವರೆಗೆ 21 ದಿನಗಳ ಲಾಕ್‌ಡೌನ್‌ ಜಾರಿಯಲ್ಲಿದೆ. ಇನ್ನು ಈ ಲಾಕ್‌ಡೌನ್‌ ಅವಧಿಯನ್ನು ಮುಂದಿನ 2 ತಿಂಗಳವರೆಗೆ ವಿಸ್ತರಿಸುವ ಕುರಿತಾಗಿಯೂ ಚಿಂತನೆ ನಡೆದಿದೆ.

ಭಾರತದಲ್ಲಿ ಇಂದು ಕೋವಿಡ್‌-19 ಸೋಂಕಿಗೆ ಸಿಲುಕಿದವರ ಸಂಖ್ಯೆ 6 ಸಾವಿರದ ಗಡಿ ದಾಟಿಯಾಗಿದೆ. ಆದ್ದರಿಂದಲೇ ಜನಸಾಮಾನ್ಯರು ರಸ್ತೆಗಳಲ್ಲಿ ಅಡ್ಡಾಡುವುದನ್ನು ತಪ್ಪಿಸಲು ಪೊಲೀಸರು ಹಗಲು ರಾತ್ರಿ ಪ್ರಯತ್ನ ನಡೆಸುತ್ತಿದ್ದಾರೆ.

ಆದರೆ, ಟೀಮ್‌ ಇಂಡಿಯಾದ ಅವಕಾಶ ವಂಚಿತ ಆಟಗಾರ ಆಲ್‌ರೌಂಡರ್‌ ರಿಷಿ ಧವನ್‌ ಬೇಜವಾಬ್ದಾರಿತನ ಮೆರೆದು ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡುವ ಮೂಲಕ 500 ರೂ. ದಂಡ ತೆತ್ತಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಹಿಮಾಚಲ ಪ್ರದೇಶದ ಆಲ್‌ರೌಂಡರ್ ರಿಷಿ ಧವನ್ ಅವರು ಬ್ಯಾಂಕ್‌ಗೆ ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ವಾಹನಕ್ಕೆ ಪಾಸ್ ಇಲ್ಲದ ಕಾರಣ ಆಟಗಾರನಿಗೆ 500 ರೂ.ಗಳ ದಂಡ ವಿಧಿಸಲಾಗಿದೆ.  ವರದಿಗಳ ಪ್ರಕಾರ, ಧವನ್ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ನಡುವಿನ ವಿರಾಮದ ಅವಧಿಯಲ್ಲಿ ಮನೆಯಿಂದ ಹೊರಬಂದಿದ್ದರು.ಧವನ್ ತಮ್ಮ ಖಾಸಗಿ ಖಾರಿನಲ್ಲಿ ಸಂಚಿಅರಿಸುತ್ತಿದ್ದ ವೇಳೆ ಪೊಲೀಸರು ತಡೆದರು.  ಆ ಸಮ್ಮಯದಲ್ಲಿ ಕ್ರಿಕೆಟಿಗ  ಸ್ಥಳದಲ್ಲೇ ದಂಡವನ್ನು ಪಾವತಿಸಿದ್ದಾರೆ

ರಿಷಿ ಧವನ್ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇಂಡಿಯಾ ಎ ಪರ ಅವರ ಮಹತ್ವದ ಪ್ರದರ್ಶನವು  2016 ರಲ್ಲಿ ಭಾರತೀಯ ತಂಡದಲ್ಲಿ ಸ್ಥಾನ ಗಿಟ್ಟಿಸುವಂತೆ ಮಾಡಿತ್ತು. ಅವರು ಮೂರು ಏಕದಿನ ಪಂದ್ಯಗಳನ್ನು ಆಡಿ12 ರನ್ ಗಳಿಸಿದ್ದಾರೆ ಮತ್ತು ಒಂದು ವಿಕೆಟ್ ಪಡೆದರು. ಅವರು ಒಂದು ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com