ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಡೇವಿಡ್ ಕ್ಯಾಪೆಲ್ ನಿಧನ

ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಡೇವಿಡ್ ಕ್ಯಾಪೆಲ್ (57) ದೀರ್ಘಕಾಲದ ಅನಾರೋಗ್ಯದ ನಂತರ ಬುಧವಾರ ನಿಧನರಾಗಿದ್ದಾರೆ.

Published: 03rd September 2020 04:28 PM  |   Last Updated: 03rd September 2020 04:28 PM   |  A+A-


capel

ಡೇವಿಡ್ ಕ್ಯಾಪೆಲ್

Posted By : Lingaraj Badiger
Source : UNI

ಲಂಡನ್: ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಡೇವಿಡ್ ಕ್ಯಾಪೆಲ್ (57) ದೀರ್ಘಕಾಲದ ಅನಾರೋಗ್ಯದ ನಂತರ ಬುಧವಾರ ನಿಧನರಾಗಿದ್ದಾರೆ.

1987ರಿಂದ 1990ರ ಅವಧಿಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಡೇವಿಡ್ ಅವರು 15 ಟೆಸ್ಟ್ ಮತ್ತು 23 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದರು.

ಡೇವಿಡ್ ಅವರು ಇಂಗ್ಲಿಷ್ ಕೌಂಟಿಯಲ್ಲಿ ಸತತ 32 ವರ್ಷಗಳವರೆಗೆ ನಾರ್ತಾಂಪ್ಟನ್ ಶೈರ್ ತಂಡದಲ್ಲಿ ಆಟಗಾರನಾಗಿ ಮತ್ತು ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರು ಒಟ್ಟು 270 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.

2018ರಲ್ಲಿ ಮಿದುಳಿನ ಗಡ್ಡೆಯ ಸಮಸ್ಯೆಯಿಂದ ಬಳಲುತ್ತಿದ್ದ ಡೇವಿಡ್ ಅವರು, ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು.

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp