ರಶೀದ್ ಖಾನ್
ರಶೀದ್ ಖಾನ್

ವಿಶ್ವ ನಾಯಕರೇ, ನನ್ನ ದೇಶ ರಕ್ಷಿಸಿ: ಸ್ಟಾರ್ ಕ್ರಿಕೆಟರ್ ರಶೀದ್ ಖಾನ್ ಮನವಿ

ಅಫ್ಘಾನಿಸ್ತಾನದಿಂದ ಅಮೆರಿಕಾ, ನ್ಯಾಟೋ ತಮ್ಮ ಸೇನಾ ಪಡೆಗಳನ್ನು ಹಿಂಪಡೆದುಕೊಂಡ ನಂತರ ಇಡೀ ದೇಶ ಹಿಂಚಾಚಾರ, ಹತ್ಯೆಗಳು ಹಾಗೂ ಅನಾಚಾರಗಳಿಂದ ಧಗಧಗಿಸುತ್ತಿದೆ.
Published on

ಲಂಡನ್: ಅಫ್ಘಾನಿಸ್ತಾನದಿಂದ ಅಮೆರಿಕಾ, ನ್ಯಾಟೋ ತಮ್ಮ ಸೇನಾ ಪಡೆಗಳನ್ನು ಹಿಂಪಡೆದುಕೊಂಡ ನಂತರ ಇಡೀ ದೇಶ ಹಿಂಚಾಚಾರ, ಹತ್ಯೆಗಳು ಹಾಗೂ ಅನಾಚಾರಗಳಿಂದ ಧಗಧಗಿಸುತ್ತಿದೆ. ಕಳೆದ ತಿಂಗಳು, ಹೆಲ್ಮಂಡ್, ಕಂದಹಾರ್ ಹಾಗೂ ಹೆರಾತ್ ಪ್ರಾಂತ್ಯಗಳಲ್ಲಿ  ತಾಲಿನಾನಿಗಳು ನಾಗರಿಕರ ಮೇಲೆ ನಡೆಸಿದ ದಾಳಿಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. 

ಈ ವರ್ಷದ ಮೇ 1ರಿಂದ ಅಮೆರಿಕಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ಆರಂಭಿಸಿದ ನಂತರ ಅಫ್ಘಾನಿಸ್ತಾನದಲ್ಲಿ ಉಗ್ರರ ದಾಳಿಗಳು ತೀವ್ರಗೊಂಡಿವೆ. ಅಫ್ಘಾನಿಸ್ತಾನದಲ್ಲಿ ಸುಮಾರು 400 ಜಿಲ್ಲೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪ್ರದೇಶಗಳನ್ನು ತಾಲಿಬಾನ್‌ ಗಳು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ 31 ರೊಳಗೆ ಅಮೆರಿಕಾ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂಪಡೆಯಲು ಉದ್ದೇಶಿಸಿದೆ ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ದೇಶಗಳ ನಾಯಕರಿಗೆ ಆ ದೇಶದ ಸ್ಟಾರ್ ಕ್ರಿಕೆಟರ್ ರಶೀದ್ ಖಾನ್ ಅವರು ತಮ್ಮ ದೇಶ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 

ವಿಶ್ವ ನಾಯಕರೆಲ್ಲಾ ಒಂದಾಗಿ ತನ್ನ ದೇಶವನ್ನು ರಕ್ಷಿಸಿ, ಶಾಂತಿ ಸ್ಥಾಪಿಸಬೇಕೇಂದು ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ. ನನ್ನ ದೇಶ ಅತ್ಯಂತ ಸಂಕಷ್ಟದಲ್ಲಿದೆ. ಪ್ರತಿದಿನ ಸಾವಿರಾರು ಅಮಾಯಕರು ಮಕ್ಕಳು ಹಾಗೂ ಮಹಿಳೆಯರು ಹುತಾತ್ಮರಾಗುತ್ತಿದ್ದಾರೆ. ಮನೆ, ಮಠ, ಆಸ್ತಿ ಪಾಸ್ತಿಗಳನ್ನು ಧ್ವಂಸಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸಾವಿರಾರು ಕುಟುಂಬಗಳು ವಸತಿರಹಿತವಾಗಿವೆ. ನಮ್ಮನ್ನು ಇಂತಹ ಸಂಕಷ್ಟ.. ಗೊಂದಲದಲ್ಲಿ ಸಿಲುಕಿಸಬೇಡಿ. "ನಮಗೆ ಶಾಂತಿ ಬೇಕಾಗಿದೆ" ಎಂದು ರಶೀದ್ ಅವರು ಅವರು ಟ್ವಿಟರ್‌ನಲ್ಲಿ ತಮ್ಮ ಕಳವಳ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com