
ಮುಂಬೈ: ಐಪಿಎಲ್ ದಯೆಯಿಂದಾಗಿ ರಾತ್ರೋರಾತ್ರಿ ಸ್ಟಾರ್ ಗಳಾದ ಕ್ರಿಕೆಟಿಗರಲ್ಲಿ ಪಾಂಡ್ಯಾ ಸಹೋದರರು (ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ) ಮುಂಚೂಣಿಯಲ್ಲಿದ್ದಾರೆ.
ಇವರಿಬ್ಬರೂ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಫ್ರಾಂಚೈಸಿಯ ಮುಂಬೈ ಇಂಡಿಯನ್ಸ್ ಪ್ರತಿನಿಧಿಸುತ್ತಿದ್ದಾರೆ. ಪಾಂಡ್ಯ ಸಹೋದರರು ಮುಂಬೈ ಇಂಡಿಯನ್ಸ್ ತಂಡ ಸೇರಿದ ನಂತರ ಅವರ ಜೀವನಶೈಲಿ ಭಾರಿ ಬದಲಾವಣೆಗೊಂಡಿದೆ.ಐಷಾರಾಮಿ ಫ್ಲಾಟ್‌ಗಳು, ವಿಲಾಸಯುತ ಜೀವನಶೈಲಿ, ದುಬಾರಿ ಕಾರುಗಳು, ಬ್ರಾಂಡೆಡ್ ಸರಕುಗಳಿಗೆ ಲೆಕ್ಕವೇ ಇಲ್ಲದಂತಾಗಿದೆ.
ಇತ್ತೀಚೆಗೆ, ಪಾಂಡ್ಯ ಸಹೋದರರ ಪೈಕಿ ಕಿರಿಯ ಸಹೋದರ ಹಾರ್ದಿಕ್ ಪಾಂಡ್ಯ ದುಬಾರಿ ಬೆಲೆ ಟ್ಯಾಗ್ ಇರುವ ಕೈಗಡಿಯಾರ ಖರೀದಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಪಟೇಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ಎಂಬ ಬ್ರಾಂಡೆಡ್ ವಾಚ್ ಖರೀದಿಸಿದ್ದಾರೆ. ಈ ವಾಚಿನ ಡಯಲ್ ಸುತ್ತ 32 ಅತ್ಯಂತ ಅಪರೂಪದ ಪಚ್ಚೆ ಕಲ್ಲುಗಳಿಂದ ಕೂಡಿದೆ. ಗಡಿಯಾರವನ್ನು ಸಂಪೂರ್ಣವಾಗಿ ಪ್ಲಾಟಿನಂನಿಂದ ತಯಾರಿಸಲಾಗಿದೆ. ಇದರ ಬೆಲೆ ಬರೋಬ್ಬರಿ 5 ಕೋಟಿಗೂ ಹೆಚ್ಚು ಎಂದರೆ ನೀವು ನಂಬುತ್ತೀರಾ? ಆದರೆ ಇದು ನಿಜ.
ಇದು 5711 ರೇಂಜ್ ಅಪರೂಪದ ವಾಚ್ ಆಗಿದೆ. ಇದು ವಿಶ್ವದ ಅತ್ಯಂತ ದುಬಾರಿ ಕೈಗಡಿಯಾರಗಳಲ್ಲಿ ಒಂದಾಗಿದೆ. ಹಾರ್ದಿಕ್ ಈ ವಾಚ್ ಖರೀದಿಸಿರುವ ವಿಷಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
Advertisement