ಭಾರತೀಯ ಮೂಲದ ಮಾಜಿ ಮಹಿಳಾ ಕ್ರಿಕೆಟರ್ ಇಶಾ ಗುಹಾ ಡಬಲ್ ಮೀನಿಂಗ್ ಕಾಮೆಂಟರಿ; ಬೇಸ್ತು ಬಿದ್ದ ಬಿಬಿಎಲ್ ಕಾಮೆಂಟೇಟರ್ಸ್! 

ಕೆಲವೊಮ್ಮೆ ಹಾಗಾಗುವುದು ಉಂಟು! ನಮಗೆ ಅರಿವೇ ಇಲ್ಲದೇ ನಾವಾಡಿದ ಮಾತು ಬೇರೊಂದು ಅರ್ಥವನ್ನು ಧ್ವನಿಸುತ್ತದೆ. ಸಾರ್ವಜನಿಕ ಜೀವನದಲ್ಲಿದ್ದವರು ಈ ಎಡವಟ್ಟಿಗೆ ಗುರಿಯಾದರೆ ಮುಗಿದೇ ಹೋಯ್ತು ಅವರ ಮಾತು ದಿನಗಟ್ಟಲೆ ಚರ್ಚೆಗೆ ಆಹಾರ! 
ಇಶಾ ಗುಹಾ
ಇಶಾ ಗುಹಾ
Updated on

ಕೆಲವೊಮ್ಮೆ ಹಾಗಾಗುವುದು ಉಂಟು! ನಮಗೆ ಅರಿವೇ ಇಲ್ಲದೇ ನಾವಾಡಿದ ಮಾತು ಬೇರೊಂದು ಅರ್ಥವನ್ನು ಧ್ವನಿಸುತ್ತದೆ. ಸಾರ್ವಜನಿಕ ಜೀವನದಲ್ಲಿದ್ದವರು ಈ ಎಡವಟ್ಟಿಗೆ ಗುರಿಯಾದರೆ ಮುಗಿದೇ ಹೋಯ್ತು ಅವರ ಮಾತು ದಿನಗಟ್ಟಲೆ ಚರ್ಚೆಗೆ ಆಹಾರ! 

ಇಂಗ್ಲೆಂಡ್ ನ ಮಾಜಿ ಮಹಿಳಾ ಕ್ರಿಕೆಟರ್, ಭಾರತೀಯ ಮೂಲದ ಇಶಾ ಗುಹಾ ಸದ್ಯಕ್ಕೆ ಇಂಥಹದ್ದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. 

ಆಗಿದ್ದಿಷ್ಟು...  ಪ್ರಕೃತ ಕ್ರಿಕೆಟ್ ಕಾಮೆಂಟೇಟರ್ ಆಗಿರುವ ಇಶಾ ಗುಹಾ, ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲಿ ಕಾಮೆಂಟರಿ ಮಾಡುತ್ತಿದ್ದರು. ಆಕೆಯೊಂದಿಗೆ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್ಕ್ರಿಸ್ಟ್ ಹಾಗೂ ಕೆರ್ರಿ ಓ ಕೀಫ್ ಕಾಮೆಂಟರಿ ನೀಡುತ್ತಿದ್ದರು. 

ಈ ವೇಳೆ ಕ್ಯಾರಮ್ ಬಾಲ್ ವಿಷಯದತ್ತ ವೀಕ್ಷಕ ವಿವರಣೆ ಹೊರಳಿ, ಮಾಜಿ ಸ್ಪಿನ್ನರ್ ಆಗಿರುವ ಓ ಕೀಫ್ ಕ್ರಿಕೆಟ್ ಕೋಚ್​ಗಳು ಸ್ಪಿನ್ ಬೌಲರ್ ಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ ಎಂಬ ಬಗ್ಗೆ ವಿವರಣೆ ನೀಡುತ್ತಿದ್ದರು. ಆಗಲೇ ಇಶಾ ಗುಹಾ ತಮಗೇ ಅರಿವಿಲ್ಲದೇ ಡಬಲ್ ಮೀನಿಂಗ್ ಹೇಳಿಕೆ ನೀಡಿದ್ದಾರೆ.

‘ಸ್ಪಿನ್ ಬೌಲರ್ ಗಳನ್ನು ಆಯ್ಕೆ ಮಾಡುವಾಗ ಮಧ್ಯದ ಕೈಬೆರಳು  ಅತ್ಯಂತ ಉದ್ದವಾಗಿ ಇರುವ ಆಟಗಾರನನ್ನು ಕೋಚ್ ಗಳು ಹೆಚ್ಚಾಗಿ ಕ್ಯಾರಂ ಬಾಲ್ ಸ್ಪಿನ್ನರ್ ಆಗಿ ಆಯ್ಕೆ ಮಾಡುತ್ತಿದ್ದರು’ ಎಂದು ಓ ಕೀಫ್ ಹೇಳಿದರು. 

ಓ ಕೀಫ್ ಕೂಡ ಮಾಜಿ ಕ್ರಿಕೆಟಿಗರಾದ್ದರಿಂದ ಇಶಾ ಗುಹಾ ತಕ್ಷಣವೇ  ‘ನಿಮ್ಮದು ಎಷ್ಟು ದೊಡ್ಡದಿದೆ, ತೋರಿಸಿ’ ಎಂದು ಕೇಳಿದ್ದಾರೆ. ಅದೇ ಕ್ಷಣದಲ್ಲಿ ತಮ್ಮ ಮಾತಿನಲ್ಲಿರುವ ಡಬಲ್ ಮೀನಿಂಗ್ ಅರಿತುಕೊಂಡ ಇಶಾ ಗುಹಾ ಜೋರಾಗಿ ನಕ್ಕಿದ್ದಾರೆ.  ಪಕ್ಕದಲ್ಲೇ ಇದ್ದ ಗಿಲ್ಕ್ರಿಸ್ಟ್ ಹೇಗೋ ನಗುವನ್ನು ತಡೆದುಕೊಂಡು ವೀಕ್ಷಕವಿವರಣೆಯ ವಿಷಯವನ್ನು ಬೇರೆಡೆಗೆ ತಿರುಗಿಸಿ ಪರಿಸ್ಥಿತಿ ನಿಭಾಯಿಸಿದರು. ಇಶಾ ಗುಹಾ ಅವರ ಈ ಹೇಳಿಕೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com