ಸೆಂಚುರಿಯನ್: ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ- ಭಾರತ ನಡುವಣ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆಯಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ಜಸ್ಪೀತ್ ಬೂಮ್ರಾ ಮೈದಾನದಿಂದ ನಿರ್ಗಮಿಸಿದ್ದಾರೆ.
ಮೂರನೇ ದಿನ ಭಾರತ ತಂಡ ಹಠಾತ್ ಕುಸಿತ ಕಂಡು 325 ರನ್ ಗಳ ಗಡಿ ದಾಟುವಲ್ಲಿ ಕಾರಣರಾದ ಬುಮ್ರಾ, ಮೈದಾನದಿಂದ ಹೊರನಡೆಯುವ ಮೊದಲು ನಾಯಕ ಡೀನ್ ಎಲ್ಗರ್ ಅವರನ್ನು ಔಟ್ ಮಾಡಿದರು. ತಮ್ಮ 6ನೇ ಓವರ್ ಎಸೆಯುವಾಗ ಬುಮ್ರಾ, ಫಾಲೋ ಥ್ರೂ ವೇಳೆ ಬಲಗಾಲನ್ನು ಉಳುಕಿಸಿಕೊಂಡರು.
ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಜಸ್ಪ್ರೀತ್ ಬುಮ್ರಾ ಅವರ ಬಲಗಾಲು ಉಳುಕಿದ್ದು. ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ. ಶ್ರೇಯಸ್ ಅಯ್ಯರ್ ಅವರ ಬದಲಿ ಆಟಗಾರನಾಗಿ ಮೈದಾನದಲ್ಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
Advertisement